alex Certify ಮದುವೆಯ ದಿನ ಎತ್ತಿನಗಾಡಿಯಲ್ಲಿ ಬಂದ ವಧು: ಹಳೆಯ ಸಂಪ್ರದಾಯಕ್ಕೆ ಮೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯ ದಿನ ಎತ್ತಿನಗಾಡಿಯಲ್ಲಿ ಬಂದ ವಧು: ಹಳೆಯ ಸಂಪ್ರದಾಯಕ್ಕೆ ಮೊರೆ

ಮದುವೆ ಸಂದರ್ಭಗಳಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಡುವುದು ಸಾಮಾನ್ಯವಾಗಿದೆ. ಇದರ ಹೊಡೆತದಲ್ಲಿ ನಮ್ಮ ಸಂಪ್ರದಾಯಗಳು ಎಲ್ಲಿ ಮರೆಯಾಗಿಬಿಡುತ್ತವೆಯೋ ಎಂಬ ಆತಂಕ ಒಂದೆಡೆಯಿದೆ. ಆದರೆ ಈ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಜೀವ ತುಂಬುವ ಕೆಲಸವನ್ನು ಕೆಲ ದಂಪತಿ ಮಾಡುತ್ತಿದ್ದಾರೆ.

ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಯುವ ದಂಪತಿ ತಮ್ಮ ಮದುವೆಯ ಸಮಯದಲ್ಲಿ ಎತ್ತಿನ ಬಂಡಿಯ ಸಹಾಯವನ್ನು ಪಡೆದಿದ್ದು ಅದರ ವಿಡಿಯೋ ವೈರಲ್​ ಆಗಿದೆ. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಧು-ವರರು- ಸರಿತಾ ಬೆಹೆರಾ ಮತ್ತು ಮಹೇಂದ್ರ ನಾಯಕ್ ಭುವನೇಶ್ವರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಂಡ ನಂತರ, ಹಳೆಯ ಸಂಪ್ರದಾಯಗಳನ್ನು ಅನುಸರಿಸಲು ಬಯಸಿದ್ದರಿಂದ ಮದುವೆ ಸಂದರ್ಭದಲ್ಲಿ ಯಾವುದೇ ವಾಹನಗಳನ್ನು ಬಳಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಮಹೇಂದ್ರನು ವಧುವಿನ ಸ್ಥಳಕ್ಕೆ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಬಂದರೆ, ಸರಿತಾ ಮದುವೆಯ ನಂತರ ತನ್ನ ಅತ್ತೆಯ ಮನೆಗೆ ಅಲಂಕೃತವಾದ ಎತ್ತಿನ ಬಂಡಿಯಲ್ಲಿ ಹೋಗಿದ್ದು, ನೆಟ್ಟಿಗರು ಶಹಬ್ಬಾಸ್​ಗಿರಿ ಕೊಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...