ವಿಶ್ವ ಬೈಸಿಕಲ್ ದಿನವಾದ ಜೂನ್ 3ರಂದು ಫಿಟ್ನೆಸ್ ಕಾಪಾಡಿಕೊಳ್ಳಲು ಹಾಗೂ ಪರ್ಯಾವರಣ ಸ್ನೇಹಿ ಸಾರಿಗೆ ಮೂಲವಾದ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಲೆಕ್ಕವಿಲ್ಲದಷ್ಟು ಮೀಮ್‌ಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಒಡಿಶಾದ ಪುರಿಯ ಕಲಾವಿದರೊಬ್ಬರು ಜಗತ್ತಿನ ಮೊದಲ ಬೈಸಿಕಲ್‌ನ ಮಾದರಿಯನ್ನು ಬೆಂಕಿಕಡ್ಡಿಗಳನ್ನು ಬಳಸಿಕೊಂಡು ಮರುಸೃಷ್ಟಿಸಿದ್ದಾರೆ. 1870ರಲ್ಲಿ ಅನ್ವೇಷಣೆ ಮಾಡಲಾದ ಪೆನ್ನಿ-ಫಾರ್ತಿಂಗ್ ಹೆಸರಿನ ಈ ಬೈಸಿಕಲ್ ಮಾದರಿಯನ್ನು 18 ವರ್ಷ ವಯಸ್ಸಿನ ಸಾಸ್ವತ್ ರಂಜನ್ 3,653 ಬೆಂಕಿಕಡ್ಡಿಗಳ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಈ ಕಲೆಯನ್ನು ಪೂರ್ಣಗೊಳಿಸಲು ಒಂದು ವಾರದಷ್ಟು ಸಮಯ ಹಿಡಿಯಿತು ಎಂದು ಸಾಸ್ವತ್ ತಿಳಿಸಿದ್ದಾರೆ.
ಸಾಹೋ ಸೃಷ್ಟಿಸಿದ ಈ ಮಾಡೆಲ್, 50 ಇಂಚಿನಷ್ಟು ಉದ್ದವಿದ್ದು, 25 ಇಂಚುಗಳಷ್ಟು ಅಗಲವಿದೆ. ತಾನು ಶಾಲಾದಿನಗಳಲ್ಲಿದ್ದ ವೇಳೆ ಪೆನ್ನಿ-ಫಾರ್ತಿಂಗ್ ಯಂತ್ರವನ್ನು ಮೊದಲ ಬಾರಿಗೆ ನೋಡಿದ್ದಾಗಿ ಸಾಸ್ವತ್ ತಿಳಿಸಿದ್ದಾರೆ.