
ಕಳೆದ 10 ವರ್ಷಗಳಿಂದ ಮರದ ಕಲೆಯಲ್ಲಿ ನಿರತರಾದ ಅರುಣ್ ಸಾಹು, ತಾಜ್ ಮಹಲ್, ಇಂಡಿಯಾ ಗೇಟ್, ಗೇಟ್‌ವೇ ಆಫ್ ಇಂಡಿಯಾ ಹಾಗೂ ಐಫೆಲ್ ಟವರ್‌ಗಳನ್ನು ಮರದಲ್ಲಿ ಕೆತ್ತಿದ್ದಾರೆ.
‘ಟಿಂಡರ್’ ಅಪ್ಲಿಕೇಷನ್ ಬಳಕೆದಾರರಿಗೆ ಇನ್ಮುಂದೆ ಬೇಡ ಈ ಟೆನ್ಷನ್
ಇದೀಗ ತಮ್ಮ ಹನುಮಾನ್ ಚಾಲೀಸಾ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ಗೆ ಉಡುಗೊರೆ ನೀಡಲು ಇಚ್ಛಿಸಿರುವ ಸಾಹು, “ಲಾಕ್‌ಡೌನ್ ಅವಧಿಯಲ್ಲಿ, ಏನಾದರೂ ಭಿನ್ನವಾಗಿ ಮಾಡಬೇಕೆಂದುಕೊಂಡ ನಾನು ಹನುಮಾನ್ ಚಾಲೀಸಾವನ್ನು ಹಿಂದಿಯಲ್ಲಿ ಕೆತ್ತಿದ್ದೇನೆ” ಎಂದಿದ್ದಾರೆ.
ಕನ್ನಡಿಗರು ತಬ್ಬಲಿಗಳಲ್ಲ; ಭಾಷಾಭಿಮಾನ ಬಡಿದೆಬ್ಬಿಸಿ; ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ಕುಮಾರಸ್ವಾಮಿ
ಅರುಣ್ ಸಾಹುರ ತಂದೆ ಭಾಸ್ಕರ್ ಸಾಹು ವೃತ್ತಿಯಲ್ಲಿ ಮರಗೆಲಸದವರಾಗಿದ್ದಾರೆ. ಕಾಲೇಜ್ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ ಸಾಹು, ತಮ್ಮ ಕುಟುಂಬದ ಬ್ಯುಸಿನೆಸ್‌ಗೆ ನೆರವಾಗಲು ಮುಂದಾಗಿದ್ದಾರೆ.
ಬಹಳ ಚಿಕ್ಕವಯಸ್ಸಿನಿಂದಲೇ ಮರದ ಕಲೆಯ ಮೇಲೆ ಆಸಕ್ತಿ ಬೆಳೆಸಿಕೊಂಡ ಅರುಣ್ ಕಳೆದ ವರ್ಷ ಲಾಕ್‌ಡೌನ್ ಆದಾಗಿನಿಂದ ಸಾಕಷ್ಟು ಮರದ ಕಲಾಕೃತಿಗಳನ್ನು ರಚಿಸಿದ್ದಾರೆ.
