alex Certify World cup-2023: ಸ್ಟೇಡಿಯಂನಲ್ಲಿನ ಕುರ್ಚಿಗಳ ಮೇಲೆ ಹಕ್ಕಿಗಳ ಹಿಕ್ಕೆ; ಜಯ್ ಶಾ ಮೇಲೆ ಫ್ಯಾನ್ಸ್ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

World cup-2023: ಸ್ಟೇಡಿಯಂನಲ್ಲಿನ ಕುರ್ಚಿಗಳ ಮೇಲೆ ಹಕ್ಕಿಗಳ ಹಿಕ್ಕೆ; ಜಯ್ ಶಾ ಮೇಲೆ ಫ್ಯಾನ್ಸ್ ಗರಂ

ನಾಳೆಯಿಂದ ವಿಶ್ವಕಪ್ ಸಮರ. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಈ ಕ್ರಿಕೆಟ್ ಹಬ್ಬವನ್ನ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಹೈದರಾಬಾದ್ ನಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಶ್ವಕಪ್‌ಗೆ ಟೂರ್ನಮೆಂಟ್ ಪ್ರಾರಂಭವಾಗಲು ಕೇವಲ ಒಂದು ದಿನ ಬಾಕಿ ಇರುವಾಗ ಆತಂಕಗಳು ಹುಟ್ಟಿಕೊಂಡಿವೆ.

ಕ್ರೀಡಾಂಗಣದ ಕೆಲವು ಆಸನಗಳು ಶೋಚನೀಯ ಸ್ಥಿತಿಯಲ್ಲಿದ್ದು ಪಕ್ಷಿಗಳ ಹಿಕ್ಕೆಗಳಿಂದ ಹಾಳಾಗಿವೆ. ಸೀಟ್ ಗಳ ಮೇಲೆಲ್ಲಾ ಪಕ್ಷಿಗಳು ಹಿಕ್ಕೆ ಹಾಕಿದ್ದು ಪ್ರೇಕ್ಷಕರು ಕೂರಲು ಸಹ ಯೋಗ್ಯವಾಗಿಲ್ಲ. ಮೂರು ನಿರ್ಣಾಯಕ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಸೇರುವ ಅಭಿಮಾನಿಗಳಿಗೆ ಇಂತಹ ಸೀಟ್ ಗಳ ಚಿತ್ರಣ ಅಸಹ್ಯ ಹುಟ್ಟಿಸಿವೆ.

ಹೈದರಾಬಾದ್ ಒಟ್ಟು ಮೂರು ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಆದರೆ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸನಗಳ ಸ್ಥಿತಿಯು ಬಿಸಿಸಿಐ ಮತ್ತು ಕ್ರೀಡಾಂಗಣದ ನಿರ್ವಹಣೆಗೆ ಮಹತ್ವದ ಸವಾಲಾಗಿದೆ. ಈ ಕ್ರೀಡಾಂಗಣದಲ್ಲಿ ಪಂದ್ಯಗಳು ಪ್ರಾರಂಭವಾಗಲು ಕೇವಲ ಎರಡು ದಿನಗಳು ಉಳಿದಿದ್ದು ಸೀಟ್ ಗಳ ಸ್ಥಿತಿ ಶೋಚನೀಯವಾಗಿದೆ.

ಕ್ರೀಡಾಂಗಣದ ಸಿಬ್ಬಂದಿ ಇವುಗಳನ್ನು ಸ್ವಚ್ಚಗೊಳಿಸಿ ಅಭಿಮಾನಿಗಳಿಗೆ ಆರಾಮದಾಯಕ ಅನುಭವವನ್ನು ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಆದರೆ ಇಂತಹ ಕೊಳಕು ವಾತಾವರಣ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು, ಕೆಲವರು ಕ್ರೀಡಾಂಗಣದ ಸ್ಥಿತಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಾರಣವೆಂದು ದೂರಿದ್ದಾರೆ.

ಏತನ್ಮಧ್ಯೆ ಪ್ರಸ್ತುತ ಹೈದರಾಬಾದ್‌ನಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ತಮ್ಮ ಪಂದ್ಯಾವಳಿಯ ಸಿದ್ಧತೆಗಳ ಭಾಗವಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಗಳಿಗಾಗಿ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನು ಬಳಸಿಕೊಂಡಿದೆ. ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಪ್ರಮುಖ ವಿಶ್ವಕಪ್ ಪಂದ್ಯಾವಳಿಯು ಪ್ರಾರಂಭವಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...