alex Certify ಪರ್ಸ್ ನಲ್ಲಿ ಲಾಟರಿ ಟಿಕೆಟ್ ಇಟ್ಟು ಮರೆತು ಹೋದ ಮಹಿಳೆ, ಆಮೇಲೆ ಆಗಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರ್ಸ್ ನಲ್ಲಿ ಲಾಟರಿ ಟಿಕೆಟ್ ಇಟ್ಟು ಮರೆತು ಹೋದ ಮಹಿಳೆ, ಆಮೇಲೆ ಆಗಿದ್ದೇನು ಗೊತ್ತಾ….?

ಕೆಲವೊಬ್ಬರಿಗೆ ಅದೃಷ್ಟ ಕೈಕೊಡುತ್ತದೆ ಅನ್ನುತ್ತಾರೆ. ಇನ್ನು ಕೆಲವರು ಬಂದಿರೋ ಅದೃಷ್ಟಕ್ಕೆ ಅಸಡ್ಡೆ ತೋರಿಸುವ ಪರಿಣಾಮ ಕೈತಪ್ಪಿ ಹೋಗುತ್ತೆ. ಆಮೇಲೆ ಬೇಜಾರು ಮಾಡಿಕೊಂಡರೆ ಏನು ಉಪಯೋಗ ಹೇಳಿ..?

ಹೀಗೆ ಇಲ್ಲೊಬ್ಬ ಮಹಿಳೆ ಬಂದ ಅದೃಷ್ಟವನ್ನು ಪರ್ಸ್ ನಲ್ಲೇ ಇಟ್ಟುಬಿಟ್ಟಿದ್ದಾಳೆ. ಅರೆ, ಇವರೇನು ಹೇಳುತ್ತಿದ್ದಾರೆ ಅಂತಾ ಆಶ್ಚರ್ಯಪಡಬೇಡಿ, ಈ ಸ್ಟೋರಿ ಓದಿ…

ಜರ್ಮನಿಯ 45 ವರ್ಷದ ಮಹಿಳೆ ಲೋವರ್ ಫ್ರಾಂಕೋನಿಯಾ ಎಂಬಾಕೆಗೆ ಲಾಟರಿ ಟಿಕೆಟ್ ನಲ್ಲಿ $39 ಮಿಲಿಯನ್ ಅಂದರೆ 290 ಕೋಟಿ ರೂ. ಅದೃಷ್ಟ ಖುಲಾಯಿಸಿತ್ತು. ಆದರೆ, ದುರಾದೃಷ್ಟ ನೋಡಿ ತಾನು ಲಾಟರಿ ಟಿಕೆಟ್ ತೆಗೆದುಕೊಂಡು ಪರ್ಸ್ ನಲ್ಲೇ ಇಟ್ಟುಕೊಂಡಿದ್ದು, ಮರೆತುಬಿಟ್ಟಿದ್ದಾಳೆ.

ತಾನು ಮತಾಂತರಗೊಂಡಿಲ್ಲ ಎಂದು ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ನತ್ತ ಕಾಲ್ನಡಿಗೆಯಲ್ಲಿ ಹೊರಟ ಯುವಕ

ಒಂದು ತಿಂಗಳ ನಂತರ ಮತ್ತೊಂದು ಲಾಟರಿ ಟಿಕೆಟ್ ಪಡೆದುಕೊಳ್ಳುವ ವೇಳೆ, ತನ್ನ ಹಳೆಯ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಅದರಲ್ಲಿರುವ ಎಲ್ಲಾ ಏಳು ಸಂಖ್ಯೆಯೂ ಹೊಂದಾಣಿಕೆಯಾದಾಗ ಅವಳಿಗೆ ನಿರಾಸೆಯಾಗಿದೆ. ವಿಪರ್ಯಾಸವೆಂದರೆ ಒಂದು ವಾರಕ್ಕೂ ಹೆಚ್ಚು ಕಾಲ ಫ್ರಾಂಕೋನಿಯಾ ಮಿಲಿಯನೇ ಆಗಿದ್ದಳು ಎಂಬ ಬಗ್ಗೆ ಆಕೆಗೇ ತಿಳಿದಿರಲಿಲ್ಲ. ತಾನು ಮಾಡಿದ ನಿರ್ಲಕ್ಷ್ಯಕ್ಕೆ ಪರಿತಪಿಸಿದ್ದಾಳೆ.

ವರದಿಗಳ ಪ್ರಕಾರ, ಫ್ರಾಂಕೋನಿಯಾ ಇನ್ನೂ ಒಂದು ತಿಂಗಳ ಹಳೆಯ ಟಿಕೆಟ್ ನೊಂದಿಗೆ ಬಹುಮಾನ ಪಡೆಯುವಷ್ಟು ಅದೃಷ್ಟಶಾಲಿಯಾಗಿದ್ದಾಳೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...