ಮಹಾರಾಷ್ಟ್ರದ ಪುಣೆಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. 64 ವರ್ಷದ ವೃದ್ಧೆ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಪರಸ್ಪರ ಚುಂಬಿಸಲು ಮುಂದಾಗಿದ್ದ ಹುಡುಗಿಯರನ್ನು ತಡೆದ ಕಾರಣ ವೃದ್ಧೆ ಮೇಲೆ ಹಲ್ಲೆ ನಡೆದಿದೆ. ಘಟನೆ ಡಿ-ಅಡಿಕ್ಷನ್ ಸೆಂಟರ್ ನಲ್ಲಿ ನಡೆದಿದೆ.
ವರದಿ ಪ್ರಕಾರ, ಈ ಘಟನೆ ಕೃಪಾ ಫೌಂಡೇಶನ್ ಡಿ-ಅಡಿಕ್ಷನ್ ಸೆಂಟರ್ ನಲ್ಲಿ ನಡೆದಿದೆ. ವೃದ್ಧೆ ಡಿ-ಅಡಿಕ್ಷನ್ ಸೆಂಟರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸೆಂಟರ್ ನಲ್ಲಿದ್ದ ಇಬ್ಬರು ಹುಡುಗಿಯರು ಪರಸ್ಪರ ಮುತ್ತಿಡಲು ಮುಂದಾಗಿದ್ದರು. ಇದನ್ನು ನೋಡಿದ ವೃದ್ಧೆ ತಡೆದಿದ್ದಾಳೆ. ಇದ್ರಿಂದ ಕೋಪಗೊಂಡ ಹುಡುಗಿಯರು ವೃದ್ಧೆ ಮೇಲೆ ದಾಳಿ ನಡೆಸಿದ್ದಾರೆ. ಮಹಿಳೆ ಹಲ್ಲು ಮುರಿದಿರುವ ಹುಡುಗಿಯರ ಈ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಲ್ಲೆ ನಂತ್ರ ಮುಂಬೈಗೆ ಹೋಗಿ ಚಿಕಿತ್ಸೆ ಪಡೆದ ಮಹಿಳೆ ವಾಪಸ್ ಬಂದ್ಮೇಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ನವಿಚಾರಣೆ ನಡೆಸುತ್ತಿದ್ದಾರೆ.