alex Certify ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಂಕೆಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರಿಗೆ ಸಿಕ್ಕಿಬಿತ್ತು ಬೆತ್ತಲೆ ಜೋಡಿ

ಜಿಂಕೆಯಿಂದ ಬೆಚ್ಚಿಬಿದ್ದು ಬುಶ್​ ಲ್ಯಾಂಡ್​ ಕಡೆಗೆ ಓಡುತ್ತಿದ್ದ ಬೆತ್ತಲೆ ಜೋಡಿಯನ್ನ ರಕ್ಷಣೆ ಮಾಡಲಾಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿದೇಶಗಳಲ್ಲಿ ಈ ರೀತಿ ಬೆತ್ತಲಾಗಿ ಸಮುದ್ರದ ಕಡೆಗೆ ಕಾಣಿಸಿಕೊಳ್ಳೋದು ಕಾಮನ್​. ಇವರನ್ನ ನ್ಯೂಡ್​ ಸನ್​ಬಾತರ್ಸ್​ ಎಂದು ಕರೆಯಲಾಗುತ್ತೆ.

ಪ್ರಾಣಿಯಿಂದ ತಪ್ಪಿಸಿಕೊಳ್ಳಲು ಈ ಬೆತ್ತಲೆ ಪುರುಷರು ಓಡುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ತುರ್ತು ಸೇವಾ ಸಿಬ್ಬಂದಿ ಇವರನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಬೆತ್ತಲೆಯಾಗಿದ್ದು ಬೆನ್ನಿಗೊಂದು ಬ್ಯಾಗ್​ನ್ನ ಧರಿಸಿದ್ದ 30 ವರ್ಷದ ವ್ಯಕ್ತಿಯನ್ನ ಮೊದಲು ಪತ್ತೆ ಮಾಡಲಾಯ್ತು ಹಾಗೂ ಬಳಿಕ 49 ವರ್ಷದ ಅರೆಬೆತ್ತಲೆಯನ್ನ ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಈ ಘಟನೆ ಸಂಬಂಧ ಮಾತನಾಡಿದ ಸೌತ್​ ವೇಲ್ಸ್ ರಾಜ್ಯ ಪೊಲೀಸ್​ ಆಯುಕ್ತ ಮಿಕ್​ ಪುಲ್ಲರ್ ಮೂರ್ಖರ ವಿರುದ್ಧ ಕಾನೂನು ಮಾಡೋದು ತುಂಬಾನೇ ಕಷ್ಟದ ಕೆಲಸ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...