ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಕೋವಿಡ್-19 ಲಸಿಕೆಯ ಹೆಚ್ಚುವರಿ ಚುಚ್ಚುಮದ್ದು ನೀಡುವ ವಿಚಾರದ ಕುರಿತಾಗಿ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹೆ ಸಮೂಹದ ಸಭೆಯ ವೇಳೆ ಚರ್ಚಿತವಾಗಲಿದೆ.
ಅಧಿಕಾರಿಗಳ ಪ್ರಕಾರ, ಈ ಹೆಚ್ಚುವರಿ ಚುಚ್ಚುಮದ್ದು ಬೂಸ್ಟರ್ ಡೋಸ್‌ಗಿಂತ ಭಿನ್ನವಾಗಿರಲಿದೆ.
ಪ್ರಾಥಮಿಕವಾಗಿ ನೀಡಲಾದ ಚುಚ್ಚುಮದ್ದುಗಳಿಂದ ಸಿಗುವ ರೋಗನಿರೋಧಕ ಶಕ್ತಿ ಕುಂಠಿತಗೊಂಡ ವ್ಯಕ್ತಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಸೋಂಕಿನಿಂದ ರಕ್ಷಣೆ ನೀಡಲು ಪ್ರಾಥಮಿಕ ಹಂತದ ಲಸಿಕೆಗಳು ಸೂಕ್ತವಾಗಿ ಕೆಲಸ ಮಾಡದೇ ಇದ್ದಲ್ಲಿ ಬೂಸ್ಟರ್ ಡೋಸ್ ಅಗತ್ಯ ಬೀಳುತ್ತದೆ.
ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಉಚಿತ ಬಸ್ ಪಾಸ್ ವಿತರಣೆ
ನಾವೆಲ್ ಕೊರೋನಾ ವೈರಸ್ ಸೋಂಕಿನ ವಿರುದ್ಧ ರಕ್ಷಣೆಗಾಗಿ ಕೋವಿಶೀಲ್ಡ್‌ಅನ್ನು ಬೂಸ್ಟರ್ ಆಗಿ ಬಳಸಲು ಅನುಮತಿ ಕೋರಿ ಸೀರಮ್ ಸಂಸ್ಥೆ ಭಾರತೀಯ ಮದ್ದು ನಿಯಂತ್ರಣ ಪ್ರಾಧಿಕಾರದ (ಡಿಜಿಸಿಐ) ಬಳಿ ಅರ್ಜಿ ಸಲ್ಲಿಸಿದೆ. ಅಸ್ಟ್ರಾಜ಼ೆಂಕಾಗೆ ಬೂಸ್ಟರ್ ಡೋಸ್ ಒದಗಿಸಲು ಬ್ರಿಟನ್‌ನ ಆರೋಗ್ಯ ಸಚಿವಾಲಯ ಅದಾಗಲೇ ಅನುಮತಿ ನೀಡಿದೆ ಎಂದು ಡಿಜಿಸಿಐಗೆ ಸಲ್ಲಿಸಿರುವ ಅರ್ಜಿಯಲ್ಲಿ ಸೀರಮ್ ಸಂಸ್ಥೆ ತಿಳಿಸಿದೆ.
ಭಾರತೀಯ ಸಾರ್ಸ್-ಕೋವ್-2- ಜೀನಾಮಿಕ್ಸ್ ಸಮೂಹ (ಇನ್ಸಾಕಾಗ್) ನವೆಂಬರ್ 29ರಂದು ಪ್ರಕಟವಾದ ತನ್ನ ವರದಿಯಲ್ಲಿ, 40 ವರ್ಷಗಳ ಮೇಲ್ಪಟ್ಟ ಮಂದಿಗೆ ಕೋವಿಡ್-19ನ ಬೂಸ್ಟರ್ ಡೋಸ್‌ಗಳನ್ನು ನೀಡಲು ಮೊದಲ ಆದ್ಯತೆ ನೀಡಲು ಸೂಚಿಸಿತ್ತು.