ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ 24-07-2021 7:06AM IST / No Comments / Posted In: Business, Latest News, Live News ಭಾರತೀಯ ರೈಲ್ವೆ ಇಲಾಖೆಯು ಹೊಸ ಎಸಿ -2 ಟೈರ್ ಎಲ್ಹೆಚ್ಬಿ ಕೋಚ್ ರೈಲುಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಈ ಹೊಸ ಕೋಚ್ಗಳು ಪ್ರತಿ ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸಿವೆ. ಪಶ್ಚಿಮ ಕೇಂದ್ರ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕೋಚ್ನ್ನು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುವ ಸಲುವಾಗಿ ಈ ಪ್ರಯೋಗ ಸಂಚಾರವನ್ನ ನಡೆಸಲಾಯ್ತು ಎಂದು ಹೇಳಿದ್ದಾರೆ. ಭಾರತೀಯ ರೈಲ್ವೆ ನಾಗ್ಡಾ-ಕೋಟಾ-ಸವಾಯಿ ಮಾಧೋಪುರ ವಿಭಾಗದಲ್ಲಿ ಡಬ್ಲುಸಿಆರ್ನಲ್ಲಿ ವಿವಿಧ ಕೋಚ್ಗಳು ವೇಗದ ಪ್ರಯೋಗವನ್ನು ನಡೆಸಿವೆ. ಇದೊಂದು 350 ಕಿಲೋಮೀಟರ್ ಉದ್ದದ ಮಾರ್ಗವಾಗಿದ್ದು ಇಲ್ಲಿಯವರೆಗೆ 8900 ಕಿಲೋಮೀಟರ್ ವೇಗದ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ. ಈ ಸಂಬಂಧ ಭಾರತೀಯ ರೈಲ್ವೆ ಇಲಾಖೆ ವಿಡಿಯೋವೊಂದನ್ನ ಶೇರ್ ಮಾಡಿದ್ದು ಇದರಲ್ಲಿ ಸ್ಪೀಡೋಮೀಟರ್ನಲ್ಲಿ ದಾಖಲಾದ ವೇಗವನ್ನೂ ನೀವು ನೋಡಬಹುದಾಗಿದೆ. ಸ್ಪೀಡೋಮೀಟರ್ನಲ್ಲಿ ವೇಗವು ಪ್ರತಿ ಗಂಟೆಗೆ 180 ಕಿಮೀ ಎಂದು ತೋರಿಸುತ್ತಿದೆ. Kota Division in West Central Railway successfully conducted trials of LHB AC 2 Tier coaches at 180 kmph in Nagda-Kota-Sawai Madhopur section. pic.twitter.com/oXRYZQXn8C — Ministry of Railways (@RailMinIndia) July 21, 2021