alex Certify ಓಲಾ ಪ್ರಯಾಣಿಕರಿಗೆ ಖುಷಿ ಸುದ್ದಿ……! ಇನ್ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಪ್ರಯಾಣಿಕರಿಗೆ ಖುಷಿ ಸುದ್ದಿ……! ಇನ್ಮುಂದೆ ಕಡಿಮೆಯಾಗಲಿದೆ ಡ್ರೈವ್ ಕ್ಯಾನ್ಸಲ್ ಸಮಸ್ಯೆ

ಕೊರೊನಾ ನಂತ್ರ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಬೆಳೆಸುವವ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ವಾಹನ ಇಲ್ಲವೆ ಓಲಾ, ಉಬರ್ ಬಳಸುವವರು ಹೆಚ್ಚಾಗಿದ್ದಾರೆ. ಓಲಾ ಕ್ಯಾಬ್ ಬಳಕೆದಾರರು, ರೈಡ್ ಕ್ಯಾನ್ಸಲ್ ಸಮಸ್ಯೆಯನ್ನು ಎದುರಿಸುತ್ತಾರೆ. ತುಂಬಾ ಸಮಯ ಕಾದ ನಂತರ ಅಥವಾ ಇನ್ನೇನು ವಾಹನ ಹತ್ತಬೇಕು ಎನ್ನುವಾಗ ಎಲ್ಲಿಗೆ ಎಂದು ಕೇಳುವ ಚಾಲಕರು ರೈಡ್ ಕ್ಯಾನ್ಸಲ್ ಮಾಡುವ ಉದಾಹರಣೆ ಸಾಕಷ್ಟಿದೆ. ಇದ್ರಿಂದ ಪ್ರಯಾಣಿಕರಿಗೆ ತೊಂದರೆಯಾಗ್ತಿತ್ತು. ಇನ್ಮುಂದೆ ಓಲಾ ಬಳಕೆದಾರರಿಗೆ ಈ ಸಮಸ್ಯೆ ಇರುವುದಿಲ್ಲ.

ಓಲಾ ಚಾಲಕರು, ಪ್ರಯಾಣಿಕರ ಬಳಿ ಎಲ್ಲಿಗೆ ಎಂದು ಪ್ರಶ್ನೆ ಕೇಳುವುದಿಲ್ಲ. ವಾಹನ ಬುಕ್ ಆಗುವ ಸಂದರ್ಭದಲ್ಲಿಯೇ ಚಾಲಕರಿಗೆ ಎಲ್ಲಿ ಹೋಗಬೇಕು ಹಾಗೂ ಪ್ರಯಾಣಿಕನ ಪಾವತಿ ವಿಧಾನ ತಿಳಿಯಲಿದೆ. ಒಂದು ವೇಳೆ ದೂರದ ಪ್ರಯಾಣ ಬೇಡ ಎನ್ನುವ ಚಾಲಕ ತಕ್ಷಣ ಡ್ರೈವ್ ಕ್ಯಾನ್ಸಲ್ ಮಾಡುತ್ತಾನೆ. ಇದ್ರಿಂದ ಪ್ರಯಾಣಿಕರಿಗೆ ತುಂಬಾ ಸಮಯ ಕಾಯುವ ಅವಶ್ಯಕತೆ ಬರುವುದಿಲ್ಲ.

ಓಲಾ ಸಹ ಸಂಸ್ಥಾಪಕ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಓಲಾ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್, ಚಾಲಕನಿಗೆ ಪ್ರಯಾಣಿಕರ ಗಮ್ಯ ಸ್ಥಾನದ ಮಾಹಿತಿ ಮೊದಲೇ ಸಿಗ್ತಿರಲಿಲ್ಲ. ಇನ್ಮುಂದೆ ಚಾಲಕರಿಗೆ ಹೋಗುವ ಜಾಗ ತಿಳಿಯುತ್ತದೆ. ಹಾಗಾಗಿ ಡ್ರೈವ್ ಕ್ಯಾನ್ಸಲ್ ಮಾಡುವ ಸಮಸ್ಯೆ ಕಡಿಮೆಯಾಗಲಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...