ಇ-ಕಾಮರ್ಸ್ ಕ್ಷೇತ್ರದಲ್ಲಿ ದೈತ್ಯನಾಗಿ ಬೆಳೆಯುವ ಆಶಯ ಹೊಂದಿರುವ ಗ್ರೋಫರ್ಸ್, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ತನಗೆ ಆರ್ಡರ್ ಮಾಡಲಾದ ಯಾವುದೇ ಉತ್ಪನ್ನವನ್ನು 10 ನಿಮಿಷಗಳಲ್ಲಿ ಡೆಲಿವರಿ ಮಾಡಲು ಸಜ್ಜಾಗುತ್ತಿದೆ.
ಈ ಸಂಬಂಧ ತಮ್ಮ ಕಂಪನಿಯ ಗುರಿಯನ್ನು ವ್ಯಕ್ತಪಡಿಸಿದ ಗ್ರೋಫರ್ಸ್ ಸಂಸ್ಥಾಪಕ ಹಾಗೂ ಸಿಇಓ ಅಲ್ಬಿಂದರ್ ದಿಂಶಾ, “ನಿಮಗೆ ಏನನ್ನಾದರೂ 10 ನಿಮಿಷದಲ್ಲಿ ಡೆಲಿವರಿ ಪಡೆಯಲು ಆಗುತ್ತದೆ ಎಂದು ಊಹಿಸಿಕೊಳ್ಳಿ. ಬೆಳಗ್ಗಿನ ಚಹಾಗೆ ಹಾಲು, ಇಂದು ರಾತ್ರಿಯ ಪಾರ್ಟಿಗೆ ಸೂಕ್ತವಾದ ಲಿಪ್‌ಸ್ಟಿಕ್, ಐಫೋನ್ ಸಹ. ನಿಮಗೆ ಇವೆಲ್ಲವನ್ನೂ ಡೆಲಿವರಿ ಮಾಡುವ ಸ್ಟೋರ್ ನಿಮ್ಮಂತೆಯೇ ಇರುವ ಒಬ್ಬ ಸಮುದಾಯಿಕ ಉದ್ಯಮಿಯದ್ದು ಎಂದು ಊಹಿಸಿಕೊಳ್ಳಿ. ಇದು ಗ್ರೋಫರ್ಸ್‌ನ ದೂರದೃಷ್ಟಿ,” ಎಂದು ಬ್ಲಾಗ್‌ನಲ್ಲಿ ಬರೆದಿದ್ದಾರೆ.
ʼಆಧಾರ್ʼ ನಲ್ಲಿ ವಿಳಾಸದ ವಿವರ ಪರಿಷ್ಕರಿಸಲು ಇಲ್ಲಿದೆ ಮಾಹಿತಿ
ಸಾಮುದಾಯಿಕ ಉದ್ಯಮಶೀಲತೆಯನ್ನು ಉತ್ತೇಜಿಸುವ ಗ್ರೋಫರ್ಸ್ ತನ್ನ ಈ ರ‍್ಯಾಪಿಡ್ ಕಾಮರ್ಸ್ ಮಹತ್ವಾಕಾಂಕ್ಷೆಗಳಿಗೆ ಬಲ ನೀಡಲು ’ಡಾರ್ಕ್ ಸ್ಟೋರ್’ಗಳನ್ನು ನಡೆಸಬಲ್ಲ ಉದ್ಯಮಿಗಳೊಂದಿಗೆ ಕೈಜೋಡಿಸುತ್ತಿದೆ.
ಬಟ್ಟೆಗಳು, ಅಪ್ಲಾಯೆನ್ಸ್‌ಗಳಂಥ ಪರಿಕರಗಳ ರೀಟೇಲ್ ಬ್ಯುಸಿನೆಸ್‌ಗಳಾದ ಈ ಡಾರ್ಕ್ ಸ್ಟೋರ್‌ಗಳನ್ನು ಆನ್ಲೈನ್ ಗ್ರಾಹಕರಿಗೆ ಸರಕು ಪೂರೈಸಲೆಂದು ಇರುವ ’ಫುಲ್‌ಫಿಲ್‌ಮೆಂಟ್ ಕೇಂದ್ರ’ಗಳನ್ನಾಗಿ ಪರಿವರ್ತಿಸಲಾಗಿದೆ. ಈ ನಿಟ್ಟಿನಲ್ಲಿ ಅದಾಗಲೇ 86 ಡಾರ್ಕ್ ಸ್ಟೋರ್‌ಗಳ ಮಾಲೀಕರೊಂದಿಗೆ ಗ್ರೋಫರ್ಸ್ ಕೈಜೋಡಿಸಿದ್ದು, ದೇಶಾದ್ಯಂತ 13 ಪ್ರದೇಶಗಳಲ್ಲಿ ಕಳೆದ ಮೂರು ತಿಂಗಳ ಅವಧಿಲ್ಲಿ ಹತ್ತು ಲಕ್ಷಕ್ಕೂ ಅಧಿಕ ಆರ್ಡರ್‌ಗಳನ್ನು ಪರಿಷ್ಕರಿಸಿದೆ.
ಸಖತ್ ಸದ್ದು ಮಾಡುತ್ತಿದೆ ಕಪಿಲ್ ದೇವ್ ರ ಈ ʼಜಾಹೀರಾತುʼ
ಕಳೆದ ತಿಂಗಳು ಕಂಪನಿ ಬಿಟ್ಟು ತಮ್ಮದೇ ಹೊಸ ಉದ್ಯಮ ಆರಂಭಿಸಲು ಹೊರಟಿರುವ ಗ್ರೋಫರ್ಸ್ ಸಹ-ಸ್ಥಾಪಕ ಸೌರಭ್ ಕುಮಾರ್, ’ವಾರ್ಪ್ಲಿ’ ಹೆಸರಿನ ಕಂಪನಿ ಹುಟ್ಟುಹಾಕಿ, ತಮ್ಮ ಕ್ಲೈಂಟ್‌ಗಳಿಗೆ ವಸ್ತುಗಳನ್ನು ನಿಮಿಷಗಳಲ್ಲಿ ಆಗದೇ ಇದ್ದರೆ ಗಂಟೆಗಳಲ್ಲಿ ಡೆಲಿವರಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಮುಂದಿನ ಕೆಲ ತಿಂಗಳುಗಳಲ್ಲಿ ಕಂಪನಿಯನ್ನು ಆರಂಭಿಸಲು ಸಜ್ಜಾಗುತ್ತಿರುವ ಕುಮಾರ್, ಇದಕ್ಕಾಗಿ ಇಂಜಿನಿಯರುಗಳು ಹಾಗೂ ಪ್ರಾಡಕ್ಟ್ ಮ್ಯಾನೇಜರುಗಳನ್ನು ಹೈರಿಂಗ್ ಮಾಡಲು ಆರಂಭಿಸಿದೆ.
ರುಚಿಕರವಾದ ʼಮಶ್ರೂಮ್ʼ ಬಿರಿಯಾನಿ ರೆಸಿಪಿ
2021ರಲ್ಲಿ $55 ಶತಕೋಟಿಯಷ್ಟು ವ್ಯವಹಾರ ಕಾಣುವ ಅಂದಾಜಿರುವ ಭಾರತದ ಇ-ಕಾಮರ್ಸ್ ಕ್ಷೇತ್ರಕ್ಕೆ ಪ್ರತಿಯಾಗಿ ಹುಟ್ಟಿಕೊಳ್ಳುತ್ತಿರುವ ಕ್ವಿಕ್-ಕಾಮರ್ಸ್ ನಿಮಗೆ ಆರ್ಡರ್ ಮಾಡಿದ ವಸ್ತುವನ್ನು 45 ನಿಮಿಷಗಳ ಒಳಗೆ ಡೆಲಿವರಿ ಮಾಡುವ ಭರವಸೆಯೊಂದಿಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ 10-15 ಪಟ್ಟು ವೃದ್ಧಿ ಸಾಧಿಸಿ, 2025ರ ವೇಳೆಗೆ $5 ಶತಕೋಟಿ ಮೌಲ್ಯದ ಮಾರುಕಟ್ಟೆಯಾಗುವ ನಿರೀಕ್ಷೆ ಇದೆ.