ಲಗೇಜ್ ಇಲ್ಲದ ಅಥವಾ ಕಡಿಮೆ ಬ್ಯಾಗೇಜ್ ಹೊಂದಿರುವ ಪ್ರಯಾಣಿಕರಿಗೆ ದೇಶಿಯ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ನೀಡಲು ವಿಮಾನಯಾನ ನಿರ್ದೇಶನಾಲಯ ಅನುಮತಿ ನೀಡಿದೆ.
ಭಾರತೀಯ ವಿಮಾನಯಾನ ನಿರ್ದೇಶನಾಲಯದ ಈ ಅನುಮತಿಯಿಂದಾಗಿ ದೇಶಿ ವಿಮಾನಯಾನ ಕೈಗೊಳ್ಳುವ ಪ್ರಯಾಣಿಕರು ಇನ್ಮುಂದೆ ಈ ವಿಶೇಷ ರಿಯಾಯಿತಿಯನ್ನ ಪಡೆಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್
ಇದರ ಪ್ರಕಾರ ದೇಶದ ಒಳಗಡೆ ವಿಮಾನ ಯಾನ ಕೈಗೊಳ್ಳುವ ಪ್ರಯಾಣಿಕ 7 ಕೆಜಿ ತೂಕದ ಕ್ಯಾಬಿನ್ ಬ್ಯಾಗೇಜ್ನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ. ಬುಕಿಂಗ್ ಸಂದರ್ಭದಲ್ಲಿ ಬ್ಯಾಗ್ನ ಬಗ್ಗೆ ಸೂಕ್ತ ಮಾಹಿತಿ ನೀಡಿ ಈ ಸೌಲಭ್ಯವನ್ನ ಪಡೆಯಬಹುದಾಗಿದೆ.
ಕಳೆದ ವರ್ಷ ಮೇ 21ರಂದು ಭಾರತೀಯ ವಿಮಾನಯಾನ ನಿರ್ದೇಶನಾಲಯ 40 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತಲುಪುವ ವಿಮಾನಗಳಿಗೆ 2000 – 6000 ರೂಪಾಯಿ ಮಿತಿ, 40 ರಿಂದ 60 ನಿಮಿಷ ಪ್ರಯಾಣಕ್ಕೆ 2500 ರೂ ಹಾಗೂ 7500 ರೂಪಾಯಿ, 60 ರಿಂದ 90 ನಿಮಿಷ ಪ್ರಯಾಣಕ್ಕೆ 3000 ಹಾಗೂ 9000 ರೂಪಾಯಿ, 90 ರಿಂದ 120 ನಿಮಿಷಕ್ಕೆ 3500 ಹಾಗೂ 10000 ರೂಪಾಯಿ. 120-150 ನಿಮಿಷಕ್ಕೆ 4500 ರಿಂದ 13 ಸಾವಿರ ರೂಪಾಯಿ. 150 ರಿಂದ 180 ನಿಮಿಷಕ್ಕೆ 5500 ಹಾಗೂ 15700 ರೂಪಾಯಿ. 180 ರಿಂದ 210 ನಿಮಿಷಕ್ಕೆ 6500 ಹಾಗೂ18600 ರೂಪಾಯಿ ಮಿತಿ ಹಾಕಿದೆ.