ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್ ತನ್ನ ಸಾಂಪ್ರದಾಯಿಕ ವಾಣಿಜ್ಯ ವಾಹನವಾದ ಟಾಟಾ 407ನ ಸಿಎನ್‌ಜಿ ರೂಪಾಂತರಗಳನ್ನು ಬಿಡುಗಡೆ ಮಾಡಿದೆ.
ಈ ಹೊಸ ಮಾಡೆಲ್ನ ಬೆಲೆಯು 12.07 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ವಾಹನವು 10 ಫೀಟ್ ಉದ್ದ ಲೋಡ್ ಡೆಕ್ನ್ನು ಹೊಂದಿದೆ. ವಾಹನವು 5 ಟನ್ನಿಂದ 16 ಟನ್ ತೂಕದಲ್ಲಿ ಲಭ್ಯವಿದೆ ಎನ್ನಲಾಗಿದೆ.
ಡೀಸೆಲ್ ಚಾಲಿತ 407ಗಳು 35 ಪ್ರತಿಶತದವರೆಗೆ ಲಾಭವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಟಾಟಾ 407 ಸಿಎನ್ಜಿಯು 3.8 ಲೀಟರ್ ಇಂಜಿನ್ ಸಾಮರ್ಥ್ಯವನ್ನು ಹೊಂದಿದೆ, ಫ್ರಂಟ್ ಪ್ಯಾರಾಬೋಲಿಕ್ ಸಸ್ಪೆನ್ಶನ್ ಹೊಂದಿದೆ. ಕ್ಲಚ್ ಹಾಗೂ ಗಿಯರ್ ಶಿಫ್ಟ್ ಬೇಕಾದ ಪ್ರಯತ್ನವನ್ನು ಕಡಿಮೆ ಮಾಡುತ್ತದೆ. ಯುಎಸ್ಬಿ ಮೊಬೈಲ್ ಚಾರ್ಜಿಂಗ್ ಪೋರ್ಟ್ ಹಾಗೂ ಬ್ಲೌಪಂಕ್ಟ್ ಮ್ಯೂಸಿಕ್ ಸಿಸ್ಟಂ ಅನ್ನು ಹೊಂದಿದೆ. 407ನ ಈ ಹೊಸ ಶ್ರೇಣಿಯು ಫ್ಲೀಟ್ ಎಡ್ಜ್ನ 2 ವರ್ಷಗಳ ಚಂದಾದಾರಿಕೆಯನ್ನು ಹೊಂದಿದೆ.