ಹಿರಿಯ ನಾಗಕರಿಗೆ ಉಚಿತ ತೀರ್ಥಯಾತ್ರೆಯನ್ನು ಕಲ್ಪಿಸುವ ದೆಹಲಿ ಸರ್ಕಾರದ ತೀರ್ಥಯಾತ್ರಾ ಯೋಜನೆಗೆ ಅಯೋಧ್ಯೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಹತ್ವದ ಮಾಹಿತಿ ನೀಡಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರ ಈ ಘೋಷಣೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಯೋಧ್ಯೆಯನ್ನು ತೀರ್ಥಯಾತ್ರೆ ಸ್ಥಳವೆಂದು ಪರಗಣಿಸಿ ಅವಕಾಶ ನೀಡಿದ್ದಕ್ಕೆ ಅನೇಕರು ಹರ್ಷ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಉತ್ತರ ಪ್ರದೇಶದಲ್ಲೂ ಆಮ್ ಆದ್ಮಿ ಪಕ್ಷವನ್ನು ಬೇರೂರುವಂತೆ ಮಾಡಲು ಅರವಿಂದ್ ಕೇಜ್ರಿವಾಲ್ ಮಾಡಿರುವ ಹುನ್ನಾರವಿದು ಎಂದು ಟೀಕಿಸುತ್ತಿದ್ದಾರೆ.
ದೀದಿ ನಾಡಲ್ಲಿ ʼದೀಪಾವಳಿʼ ಸಂಭ್ರಮಕ್ಕೆ ಬ್ರೇಕ್, ಹಸಿರು ಪಟಾಕಿಗೆ ಮಾತ್ರ ಪರ್ಮಿಷನ್
ದೆಹಲಿ ಸರ್ಕಾರ ಘೋಷಿಸಿರುವ ಈ ಯೋಜನೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ವಾರ್ಷಿಕವಾಗಿ 1100 ವೃದ್ಧರನ್ನು ಉಚಿತವಾಗಿ ತೀರ್ಥಯಾತ್ರೆಗೆ ಕೊಂಡೊಯ್ಯಲಾಗುತ್ತದೆ. ಈ ತೀರ್ಥಯಾತ್ರೆಯ ಸಂಪೂರ್ಣ ಖರ್ಚನ್ನು ದೆಹಲಿ ಸರ್ಕಾರವೇ ಭರಿಸುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ದೆಹಲಿ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಅವಕಾಶ ಇರುತ್ತದೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ಜೊತೆ ಇನ್ನೊಬ್ಬ ಸದಸ್ಯರನ್ನು ಕರೆದುಕೊಂಡು ಹೋಗಲು ಸಹ ಅವಕಾಶ ಕಲ್ಪಿಸಲಾಗಿದೆ.