alex Certify ಎಸ್‌ಎಂಎಸ್ ಮೂಲಕ ‌ʼಆಧಾರ್‌ʼ ಲಾಕ್ ಮಾಡಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್‌ಎಂಎಸ್ ಮೂಲಕ ‌ʼಆಧಾರ್‌ʼ ಲಾಕ್ ಮಾಡಲು ಹೀಗೆ ಮಾಡಿ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಎಸ್‌ಎಂಎಸ್ ಮೂಲಕ ಆಧಾರ್‌‌ನ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಸ್ಮಾರ್ಟ್‌ಫೋನ್ ಇಲ್ಲದಿರುವ ಪ್ರಜೆಗಳೂ ಸಹ ಈ ಸೇವೆಗಳನ್ನು ಎಸ್‌ಎಂಎಸ್ ಮೂಲಕ ಪಡೆಯಬಹುದಾಗಿದೆ.

ಬೆರಗಾಗಿಸುತ್ತೆ ದೀಪಾವಳಿಗೂ ಮುನ್ನ ಈ ಕಂಪನಿ ನೀಡುತ್ತಿರುವ ‌ʼಬೋನಸ್ʼ

ಎಸ್‌ಎಂಎಸ್ ಮೂಲಕ ಆಧಾರ್‌ ವರ್ಚುವಲ್ ಐಡಿ ಪಡೆಯಲು ಹೀಗೆ ಮಾಡಿ:

1. GVID (SPACE) ಎಂದು ಎಂಟರ್‌ ಮಾಡಿ, ಆಧಾರ್‌ ಸಂಖ್ಯೆಯ ಕೊನೆ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಕಳಿಸಿ.

2. ಈಗ RVID (SPACE) ಟೈಪ್ ಮಾಡಿ, ಆಧಾರ್‌ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ.

3. ಬಳಿಕ GETOTP (space) ನಿಮ್ಮ ಆಧಾರ್‌ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ ಕಳುಹಿಸಿ.

ಎಸ್‌ಎಂಎಸ್ ಮೂಲಕ ಆಧಾರ್ ಕಾರ್ಡ್ ಲಾಕ್/ಅನ್‌ಲಾಕ್ ಮಾಡುವುದು:

1. GETOTP (SPACE) ನಿಮ್ಮ ಆಧಾರ್‌ನ ಕೊನೆಯ 4 ಅಂಕಿಗಳನ್ನು 1947ಕ್ಕೆ ಕಳುಹಿಸಿ.

2. ಓಟಿಪಿ ಸಿಕ್ಕ ಬಳಿಕ LOCKUID (SPACE) ನಿಮ್ಮ ಆಧಾರ್‌ನ ಕೊನೆಯ 4 ಅಂಕಿಗಳು (SPACE) 6 ಅಂಕಿಯ ಓಟಿಪಿಯನ್ನು 1947ಕ್ಕೆ ಕಳುಹಿಸುವ ಮೂಲಕ ನಿಮ್ಮ ಆಧಾರ್‌ ಕಾರ್ಡ್ ಅನ್ನು ಲಾಕ್ ಮಾಡಬಹುದಾಗಿದೆ.

ಅನ್‌ಲಾಕ್‌ ಗಾಗಿ:

1. GETOTP (SPACE) ನಿಮ್ಮ ವಿಐಡಿಯ ಕೊನೆಯ 6 ಅಂಕಿಗಳನ್ನು 1947ಕ್ಕೆ ಕಳುಹಿಸಿ.

2. ಓಟಿಪಿ ಸಿಕ್ಕ ಬಳಿಕ UNLOCK (SPACE) ನಿಮ್ಮ ವಿಐಡಿಯ ಕೊನೆಯ 6 ಅಂಕಿಗಳು (SPACE) ನಿಮ್ಮ ಓಟಿಪಿಯ 6 ಅಂಕಿ ಎಂಟರ್‌ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...