alex Certify ಗಮನಿಸಿ : ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ನ.19 ರಂದು ಲಿಖಿತ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ‘ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ನ.19 ರಂದು ಲಿಖಿತ ಪರೀಕ್ಷೆ

ಬೆಂಗಳೂರು : 454 ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಸಂಬಂಧ ನಿಗದಿಪಡಿಸಲಾಗಿದ್ದ ಲಿಖಿತ ಪರೀಕ್ಷೆ ನವೆಂಬರ್ 19 ರಂದು ನಡೆಯಲಿದೆ.

ನವೆಂಬರ್ 5 ರಂದು ಕೆಪಿಎಸ್ ಸಿ ಕೂಡ ವಿವಿಧ ಇಲಾಖೆಗಳ ನೇಮಕಾತಿ ನೇಮಕಾತಿ ಲಿಖಿತ ಪರೀಕ್ಷೆ ನಿಗದಿಪಡಿಸಲಾಗಿತ್ತು. ಹೀಗಾಗಿ ಎರಡೂ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳು ಕಾನ್ಸ್ ಟೇಬಲ್ ಪರೀಕ್ಷೆ ಮುಂದೂಡುವಂತೆ ಪೊಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನವೆಂಬರ್ 19 ಕ್ಕೆ ಪರೀಕ್ಷೆ ಮುಂದೂಡಲಾಗಿದೆ.

100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ವಸ್ತುನಿಷ್ಠ ಮಾದರಿಯ ಬಹುವಿಧ ಆಯ್ಕೆ ಉತ್ತರಗಳ ಪರೀಕ್ಷೆ ಇದಾಗಿರುತ್ತದೆ. ಪ್ರತಿ ಸರಿ ಉತ್ತರಕ್ಕೆ 1.00 ಅಂಕಗವನ್ನು ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.

2022-23 ನೇ ಸಾಲಿನ ಕಲ್ಯಾಣ ಕರ್ನಾಟಕದ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಸಂಬಂಧ ನವೆಂಬರ್ 5 ರಂದು ನಿಗದಿಪಡಿಸಲಾಗಿದ್ದ ಲಿಖಿತ ಪರೀಕ್ಷೆಯನ್ನು ನವೆಂಬರ್ 19 ರಂದು ಮರುನಿಗದಿ ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...