alex Certify ಗಮನಿಸಿ : ಇಂತವರಿಗೆ ಸಿಗಲ್ಲ ‘ಯುವನಿಧಿ ಯೋಜನೆ’ ಲಾಭ, ಅರ್ಜಿ ಸಲ್ಲಿಸಲು ಅರ್ಹತೆಗಳೇನು ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ : ಇಂತವರಿಗೆ ಸಿಗಲ್ಲ ‘ಯುವನಿಧಿ ಯೋಜನೆ’ ಲಾಭ, ಅರ್ಜಿ ಸಲ್ಲಿಸಲು ಅರ್ಹತೆಗಳೇನು ತಿಳಿಯಿರಿ

ಬೆಂಗಳೂರು: ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಯುವನಿಧಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿಯಲ್ಲಿ ಚಾಲನೆ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಅರ್ಹತೆಗಳೇನು..? ಯಾರಿಗೆ ಈ ಸೌಲಭ್ಯ ಸಿಗಲ್ಲ..ಮುಂತಾದ ಮಾಹಿತಿಗಳನ್ನು ತಿಳಿಯಿತಿ. ಆಧಾರ್ ಕಾರ್ಡ್, 10ನೇ ತರಗತಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ. ಡಿಪ್ಲೊಮಾ ಪ್ರಮಾಣಪತ್ರ ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಆದಾಯ ಪ್ರಮಾಣಪತ್ರ ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು, ಸ್ವಯಂ ಘೋಷಣಾ ಪ್ರತಿಗಳು ಅರ್ಜಿ ಸಲ್ಲಿಸಲು ಬೇಕು.
ಒಮ್ಮೆ ಫಲಾನುಭವಿಗಳಾಗಿ ಆಯ್ಕೆಯಾಗುವ ಯುವ ಜನತೆಗೆ 2 ವರ್ಷಗಳ ಅವಧಿವರೆಗೆ ಭತ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು..
1) ಮುಖ್ಯವಾಗಿ ಕರ್ನಾಟಕದ ನಿವಾಸಿಯಾಗಿರಬೇಕು.
2) ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1500 ರೂಪಾಯಿ ಕೊಡಲಾಗುತ್ತದೆ. ಆದರೆ, ಎರಡು ವರ್ಷಗಳ ಅವಧಿಯೊಳಗೆ ಅವರಿಗೆ ಕೆಲಸ ಸಿಕ್ಕರೆ, ತಕ್ಷಣವೇ ಈ ಭತ್ಯೆಯನ್ನು ನಿಲ್ಲಿಸಲಾಗುತ್ತದೆ.
3) ಅರ್ಜಿದಾರರು 2022-2023 ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.ಪದವಿ ಅಥವಾ ಡಿಪ್ಲೊಮಾಗೆ ತೇರ್ಗಡೆಯಾದ ದಿನಾಂಕದ ನಂತರ ಕನಿಷ್ಠ 180 ದಿನಗಳವರೆಗೆ ನಿರುದ್ಯೋಗಿಯಾಗಿರಬೇಕು.

ಯಾರಿಗೆ ಸಿಗಲ್ಲ ಈ ಸೌಲಭ್ಯ

2022-2023 ರ ಸಾಲಿಗಿಂತ ಮುಂಚೆ ತೇರ್ಗಡೆಯಾಗಿ ಉದ್ಯೋಗ ಹುಡುಕುತ್ತಿರುವವರಿಗೆ, ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವವರಿಗೆ, ಅಪ್ರೆಂಟಿಸ್ ವೇತನದ ಫಲಾನುಭವಿಗಳಿಗೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವವರಿಗೆ, ಸ್ವಯಂ ಉದ್ಯೋಗಿಗಳಾಗಿರುವವರಿಗೆ, ಸರ್ಕಾರದ ಇತರೆ ಆರ್ಥಿಕ ನೆರವು ಯೋಜನೆಯ ಫಲಾನುಭವಿಗಳಾಗಿರುವವರಿಗೆ ಈ ಯೋಜನೆ ಸಿಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...