alex Certify ಅಯೋಧ್ಯೆ ಮಾತ್ರವಲ್ಲ, ನಾಸಿಕ್‌ನ ದೇವಾಲಯದಲ್ಲೂ ಇದೆ ರಾಮನ ಕಪ್ಪು ವಿಗ್ರಹ, ಆಸಕ್ತಿದಾಯಕವಾಗಿದೆ ಇಲ್ಲಿನ ಪೌರಾಣಿಕ ಹಿನ್ನೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯೋಧ್ಯೆ ಮಾತ್ರವಲ್ಲ, ನಾಸಿಕ್‌ನ ದೇವಾಲಯದಲ್ಲೂ ಇದೆ ರಾಮನ ಕಪ್ಪು ವಿಗ್ರಹ, ಆಸಕ್ತಿದಾಯಕವಾಗಿದೆ ಇಲ್ಲಿನ ಪೌರಾಣಿಕ ಹಿನ್ನೆಲೆ

ಅಯೋಧ್ಯೆಯಲ್ಲಿ ಕಪ್ಪು ಬಣ್ಣದ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ರಾಮಲಲ್ಲಾನ ಮೂರ್ತಿ ಅತ್ಯಂತ ತೇಜೋಮಯವಾಗಿದ್ದು ದೇಶ-ವಿದೇಶಗಳ ಭಕ್ತರನ್ನು ಸೆಳೆಯುತ್ತಿದೆ. ಅದರ ಭವ್ಯತೆ ಮತ್ತು ದೈವಿಕತೆಯು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಭಗವಾನ್ ಶ್ರೀರಾಮನ ಕಪ್ಪು ವಿಗ್ರಹವನ್ನು ಪ್ರತಿಷ್ಠಾಪಿಸಿರುವ ಇನ್ನೂ ಅನೇಕ ದೇವಾಲಯಗಳಿವೆ.

ಪಂಚವಟಿ ರಾಮಮಂದಿರ:  ನಾಸಿಕ್‌ನಲ್ಲಿ ಶ್ರೀರಾಮನ ಕಪ್ಪು ವಿಗ್ರಹದ ದೈವಿಕ ರೂಪವನ್ನು ಭಕ್ತರು ಕಣ್ತುಂಬಿಕೊಳ್ಳಬಹುದು. ಈ ದೇವಾಲಯದ ಹೆಸರು ಕಲಾರಾಮ್ ದೇವಾಲಯ. ಇದು ನಾಸಿಕ್‌ನ ಪಂಚವಟಿ ಯಾತ್ರಾಸ್ಥಳದಲ್ಲಿದೆ.

ಕಲಾರಾಮ್ ದೇವಾಲಯದ ಹೆಸರಿನಲ್ಲೇ ಅದರ ಅರ್ಥವಿದೆ. ಭಗವಾನ್ ಶ್ರೀರಾಮನಲ್ಲದೆ, ತಾಯಿ ಸೀತಾಮಾತೆ ಮತ್ತು ಲಕ್ಷ್ಮಣನ ವಿಗ್ರಹಗಳನ್ನು ಸಹ ಕಲಾರಾಮ್ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ರಾಮ ಭಕ್ತ ಹನುಮಂತನ ಕಪ್ಪು ವಿಗ್ರಹವನ್ನು ದೇವಾಲಯದ ಮುಖ್ಯ ದ್ವಾರದಲ್ಲಿ ಕಾಣಬಹುದು.

1792 ರಲ್ಲಿ ಸರ್ದಾರ್ ರಂಗರಾವ್ ಓಧೇಕರ್, ಕಲಾರಾಮ್ ದೇವಾಲಯವನ್ನು ಸ್ಥಾಪಿಸಿದರು. ಓಧೇಕರ್‌ಗೆ ಒಂದು ಕನಸು ಬಿದ್ದಿತ್ತಂತೆ. ಗೋದಾವರಿ ನದಿಯಲ್ಲಿ ಭಗವಾನ್ ರಾಮನ ಕಪ್ಪು ವಿಗ್ರಹವಿದ್ದಂತೆ. ನಂತರ ವಾಸ್ತವವಾಗಿಯೂ ಅಲ್ಲಿ ವಿಗ್ರಹಗಳು ಪತ್ತೆಯಾದವು. ಹಾಗಾಗಿ ದೇವಾಲಯವನ್ನ ಸ್ಥಾಪಿಸಿ ವಿಗ್ರಹ ಪತ್ತೆಯಾದ ಸ್ಥಳಕ್ಕೆ ರಾಮಕುಂಡ್ ಎಂದು ಹೆಸರಿಡಲಾಯ್ತು. ಈ ದೇವಾಲಯವನ್ನು ನಿರ್ಮಿಸಲು 12 ವರ್ಷಗಳೇ ಬೇಕಾದವು.

ದೇವಾಲಯದ 14 ಮೆಟ್ಟಿಲುಗಳ ವಿಶೇಷತೆ

ಈ ದೇವಾಲಯದಲ್ಲಿ 14 ಮೆಟ್ಟಿಲುಗಳಿವೆ. ಇದು ಭಗವಾನ್ ಶ್ರೀರಾಮನ 14 ವರ್ಷಗಳ ವನವಾಸವನ್ನು ಪ್ರತಿನಿಧಿಸುತ್ತದೆ. ದೇವಾಲಯದ 84 ಕಂಬಗಳು 84 ಲಕ್ಷ ಜಾತಿಗಳ ಚಕ್ರವನ್ನು ಹೇಳುತ್ತವೆ.

ಭಗವಾನ್ ಶ್ರೀರಾಮನು ನಾಸಿಕ್‌ನ ಪಂಚವಟಿಯ ದಂಡಕ್ ಅರಣ್ಯದಲ್ಲಿ ವನವಾಸದ ಸಮಯದಲ್ಲಿ ಒಂದು ಗುಡಿಸಲನ್ನು ನಿರ್ಮಿಸಿ ಕೆಲವು ದಿನಗಳ ಕಾಲ ವಾಸಿಸಿದ್ದನೆಂಬ ಪ್ರತೀತಿಯಿದೆ. ಇಲ್ಲಿ 5 ಆಲದ ಮರಗಳಿವೆ, ಆದ್ದರಿಂದ ಇದನ್ನು ಪಂಚವಟಿ ಎಂದು ಕರೆಯಲಾಗುತ್ತದೆ. ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ ಸ್ಥಳ ಇದು. ಅಷ್ಟೇ ಅಲ್ಲ ಲಂಕೆಯ ರಾಜ ರಾವಣ ಇಲ್ಲಿಂದಲೇ ಸೀತೆಯನ್ನು ಅಪಹರಿಸಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...