alex Certify BIGGBOSS : ‘ಬಿಗ್ ಬಾಸ್’ ಟ್ರೋಫಿಗೆ ಮುತ್ತಿಟ್ಟಿದ್ದು ಒಬ್ಬರಲ್ಲ ಇಬ್ಬರು..ಏನಿದು ಅಸಲಿ ವಿಷ್ಯ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGGBOSS : ‘ಬಿಗ್ ಬಾಸ್’ ಟ್ರೋಫಿಗೆ ಮುತ್ತಿಟ್ಟಿದ್ದು ಒಬ್ಬರಲ್ಲ ಇಬ್ಬರು..ಏನಿದು ಅಸಲಿ ವಿಷ್ಯ..?

ಕನ್ನಡದ ಬಿಗ್ ಬಾಸ್-10 ನಿನ್ನೆಗೆ ಅಂತ್ಯಗೊಂಡಿದ್ದು, ಕಾರ್ತಿಕ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗಿನ ಕಠಿಣ ಸ್ಪರ್ಧೆಯ ನಡುವೆಯೂ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ.

ಹೌದು. ಕಾರ್ತಿಕ್ ಬಿಗ್ ಬಾಸ್ ವಿನ್ನರ್ ಆಗಿ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟರೆ, ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆಗಿದ್ದಾರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಆಗಿದ್ದಾರೆ.

‘ಬಿಗ್ ಬಾಸ್’ ಟ್ರೋಫಿ ಗೆದ್ದಿದ್ದು ಒಬ್ಬರಲ್ಲ ಇಬ್ಬರು

ಇದೇನು ವಿಷ್ಯ ಅಂತ ಯೋಚಿಸ್ತಿದ್ದೀರಾ..? ಹೌದು, ಒಂದೇ ಸಮಯಕ್ಕೆ ಕನ್ನಡ ಬಿಗ್ ಬಾಸ್ನಲ್ಲಿ ಒಬ್ಬರು ಮತ್ತೊಬ್ಬರು ಹಿಂದಿ ಬಿಗ್ ಬಾಸ್ನಲ್ಲಿ ಟ್ರೋಫಿ ಎತ್ತಿದ್ದಾರೆ. ಒಂದೇ ದಿನ ಎರಡು ಭಾಷೆಯ ಬಿಗ್ ಬಾಸ್ ಸೀಸನ್ ಗಳು ಅಂತ್ಯಗೊಂಡಿದೆ. ಕನ್ನಡದ ಬಿಗ್ ಬಾಸ್ ನಲ್ಲಿ ಕಾರ್ತಿಕ್ ವಿನ್ನರ್ ಆಗಿದ್ದರೆ ಹಿಂದಿಯ ಬಿಗ್ ಬಾಸ್ -17 ರಲ್ಲಿ ಮುನಾವರ್ ಫಾರೂಕಿ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

ಹಾಸ್ಯನಟ ಮುನಾವರ್ ಫಾರೂಕಿ ಭಾನುವಾರ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 17 ರ ವಿಜೇತ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. 32 ವರ್ಷದ ಮುನಾವರ್ ಫಾರೂಕಿ 50 ಲಕ್ಷ ನಗದು ಬಹುಮಾನ ಮತ್ತು ಕಾರನ್ನು ಮನೆಗೆ ತೆಗೆದುಕೊಂಡು ಹೋದರು.

 

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...