alex Certify ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಮುಖ್ಯ ಸಂದೇಶ ರವಾನಿಸಿದ ಮೆಕ್​ ಡಿ ಸಿಬ್ಬಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಮುಖ್ಯ ಸಂದೇಶ ರವಾನಿಸಿದ ಮೆಕ್​ ಡಿ ಸಿಬ್ಬಂದಿ..!

ಹೋಟೆಲ್​ಗಳಲ್ಲಿ, ಫಾಸ್ಟ್​ ಫುಡ್​ ಸೆಂಟರ್​ಗಳಲ್ಲಿ ಅಡುಗೆ ಕೆಲಸ ಮಾಡೋದು ಅಂದರೆ ಸುಲಭವಲ್ಲ. ಹೊರಗೆ ಸರದಿಯಲ್ಲಿ ಕಾಯುವ ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ಅಡುಗೆ ಮಾಡಿಕೊಡೋದು ಅಂದರೆ ಅಷ್ಟೇ ಒತ್ತಡ ಕೂಡ ಇರುತ್ತೆ. ಆದರು ಕೂಡ ರೆಸ್ಟಾರೆಂಟ್​ಗಳ ಪ್ರತಿಷ್ಠೆಯನ್ನ ಕಾಪಾಡುವ ಜವಾಬ್ದಾರಿ ಇರೋದ್ರಿಂದ ಎಷ್ಟೇ ಕಷ್ಟವಾದರೂ ಸಹ ಈ ಕೆಲಸವನ್ನ ಶ್ರದ್ಧೆಯಿಂದ ಮಾಡಲೇಬೇಕು.

ಅದರಲ್ಲೂ ಜನನಿಬಿಡ ಪ್ರದೇಶಗಳಲ್ಲಿ ಈ ಸ್ಟೋರ್​ಗಳು ಇವೆ ಅಂದರಂತೂ ಕತೆ ಮುಗಿದೇ ಹೋಯ್ತು. ಸಿಬ್ಬಂದಿ ದಿನಂಪೂರ್ತಿ ಬಿಡುವಿಲ್ಲದೇ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿಬಿಡುತ್ತದೆ.

ಈ ಕಷ್ಟದ ನಡುವೆಯೂ ಕೆಲವರು ಕೆಲಸ ಮಾಡೋದನ್ನ ಮುಂದುವರಿಸಿದ್ರೆ ಇನ್ನು ಹಲವರು ಸುಮ್ಮನೆ ಕೆಲಸ ಬಿಟ್ಟು ಹೊರಟುಬಿಡ್ತಾರೆ. ಆದರೆ ಇನ್ನೂ ಕೆಲವರು ತಾವು ಕೆಲಸ ಬಿಡೋಕೂ ಮುನ್ನ ತಮಗಾದ ಕಷ್ಟವನ್ನ ತೋಡಿಕೊಳ್ತಾರೆ.

ಕೆಲಸಕ್ಕೆ ರಾಜೀನಾಮೆ ಕೊಡೋದು ಅಂದರೆ ಅದು ಸುಲಭದ ಕೆಲಸವಲ್ಲ. ನಿಮಗೆ ಇನ್ನೊಂದು ಕೆಲಸ ಕೂಡಲೇ ಸಿಕ್ಕರೆ ಸಮಸ್ಯೆಯಿಲ್ಲ. ಇಲ್ಲವಾದಲ್ಲಿ ಈ ನಿರ್ಧಾರ ಮುಂದೆ ಭಾರೀ ತೊಂದರೆಯನ್ನ ಕೊಡಲೂಬಹುದು.

ಇದೇ ಮೆಕ್​ಡೊನಾಲ್ಡ್​ನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಮಾತ್ರವಲ್ಲದೇ ಕಂಪನಿಗೊಂದು ಮುಖ್ಯ ಸಂದೇಶ ರವಾನಿಸಿದ್ದಾನೆ.

ಕೆಂಟುಕಿಯಲ್ಲಿ ಮೆಕ್​ಡೊನಾಲ್ಡ್​​ನ ಶಾಖೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಲಗತ್ತಿಸಿರುವ ಸಂದೇಶ ಸೋಶಿಯಲ್​ ಮೀಡಿಯಾದಲ್ಲೂ ವೈರಲ್​ ಆಗಿದೆ. ಇದರಲ್ಲಿ ಆತ : ನಾವು ಈ ಶಾಖೆಯನ್ನ ಬಂದ್​ ಮಾಡುತ್ತಿದ್ದೇವೆ. ಏಕೆಂದರೆ ನಾನಿಲ್ಲ ಕೆಲಸ ಬಿಡುತ್ತಿದ್ದೇನೆ ಹಾಗೂ ಈ ಕೆಲಸವನ್ನ ನಾನು ದ್ವೇಷಿಸುತ್ತೇನೆ ಎಂದು ಬರೆದಿದ್ದಾನೆ. ಈ ಸಂದೇಶ ಟ್ವಿಟರ್​ ಸೇರಿದಂತೆ ಸೋಶಿಯಲ್​ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಈ ಸಂದೇಶ ನೋಡಿದ ಅನೇಕರು ಸಿಬ್ಬಂದಿಯ ಧೈರ್ಯವನ್ನ ಶ್ಲಾಘಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...