
ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರು ಜೋಡಿಯಾಗಿ ನರ್ತಿಸಿರುವ ‘ಡೋಲಾ ರೆ ಡೋಲಾ’ ಹಾಡು ಸಕತ್ ಫೇಮಸ್ ಆಗಿದೆ. ಈ ಹಾಡು ಹಾಗೂ ಈ ಜೋಡಿ ನರ್ತಿಸುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ನೃತ್ಯವನ್ನೇ ಅನುಸರಿಸಿ ಅದೆಷ್ಟೋ ಮಂದಿ ಡಾನ್ಸ್ ಮಾಡುತ್ತಿದ್ದಾರೆ. ಈಗ ಈ ನೃತ್ಯವನ್ನು ಹಾಸ್ಯದ ರೂಪದಲ್ಲಿ ಬಳಸಿರುವ ವಿಡಿಯೋ ಒಂದು ವೈರಲ್ ಆಗಿದೆ.
ಓಯೆ ಅಂಕಿತ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರ ಈ ನೃತ್ಯದ ಸೂಪರ್ ಫನ್ನಿ ಎಡಿಟ್ ಮಾಡಿದ್ದಾರೆ.
ಡೋಲಾ ರೆ ಡೋಲಾ ಹಾಡಿನ ಬದಲು ಹಿನ್ನೆಲೆಯಲ್ಲಿ ಶಕೀರಾ ಅವರ ಜನಪ್ರಿಯ ಹಾಡು ವಾಕಾ ವಾಕಾ ಹಾಕಿದ್ದು, ನೃತ್ಯ ಮಾತ್ರ ಡೋಲಾ ರೆ ಡೋಲಾ ಹಾಡಿನದ್ದು ಆಗಿದೆ.
ನೋಡುಗರು ಈ ವಿಡಿಯೋದ ಮಜಾ ತೆಗೆದುಕೊಳ್ಳುತ್ತಿದ್ದರೂ ಕೆಲವರು ಮಾತ್ರ ಗರಂ ಆಗಿದ್ದಾರೆ. ದೇವದಾಸ್ ಚಿತ್ರದ ಡೋಲಾ ರೆ ಡೋಲಾ ಹಾಡಿಗೆ ಅದರದ್ದೇ ಆದ ಮಹತ್ವ ಇದ್ದು, ಅದನ್ನು ಈ ರೀತಿಯಾಗಿ ಎಡಿಟ್ ಮಾಡಿರುವುದು ಸರಿಯಲ್ಲ ಎಂದು ಕೆಲವರು ಕಿಡಿ ಕಾರುತ್ತಿದ್ದಾರೆ.