alex Certify ‘ಡೋಲಾ ರೆ ಡೋಲಾ’ ಬದಲು ಶಕೀರಾರ ‘ವಾಕಾ ವಾಕಾ’ ಹಾಡಿಗೆ ನರ್ತಿಸಿದ ಮಾಧುರಿ – ಐಶ್ವರ್ಯಾ..! ಇದು ಎಡಿಟೆಡ್ ವಿಡಿಯೋ ಕಮಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡೋಲಾ ರೆ ಡೋಲಾ’ ಬದಲು ಶಕೀರಾರ ‘ವಾಕಾ ವಾಕಾ’ ಹಾಡಿಗೆ ನರ್ತಿಸಿದ ಮಾಧುರಿ – ಐಶ್ವರ್ಯಾ..! ಇದು ಎಡಿಟೆಡ್ ವಿಡಿಯೋ ಕಮಾಲ್

ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರು ಜೋಡಿಯಾಗಿ ನರ್ತಿಸಿರುವ ‘ಡೋಲಾ ರೆ ಡೋಲಾ’ ಹಾಡು ಸಕತ್​ ಫೇಮಸ್​ ಆಗಿದೆ. ಈ ಹಾಡು ಹಾಗೂ ಈ ಜೋಡಿ ನರ್ತಿಸುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ನೃತ್ಯವನ್ನೇ ಅನುಸರಿಸಿ ಅದೆಷ್ಟೋ ಮಂದಿ ಡಾನ್ಸ್​ ಮಾಡುತ್ತಿದ್ದಾರೆ. ಈಗ ಈ ನೃತ್ಯವನ್ನು ಹಾಸ್ಯದ ರೂಪದಲ್ಲಿ ಬಳಸಿರುವ ವಿಡಿಯೋ ಒಂದು ವೈರಲ್​ ಆಗಿದೆ.

ಓಯೆ ಅಂಕಿತ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಅವರ ಈ ನೃತ್ಯದ ಸೂಪರ್ ಫನ್ನಿ ಎಡಿಟ್ ಮಾಡಿದ್ದಾರೆ.

ಡೋಲಾ ರೆ ಡೋಲಾ ಹಾಡಿನ ಬದಲು ಹಿನ್ನೆಲೆಯಲ್ಲಿ ಶಕೀರಾ ಅವರ ಜನಪ್ರಿಯ ಹಾಡು ವಾಕಾ ವಾಕಾ ಹಾಕಿದ್ದು, ನೃತ್ಯ ಮಾತ್ರ ಡೋಲಾ ರೆ ಡೋಲಾ ಹಾಡಿನದ್ದು ಆಗಿದೆ.

ನೋಡುಗರು ಈ ವಿಡಿಯೋದ ಮಜಾ ತೆಗೆದುಕೊಳ್ಳುತ್ತಿದ್ದರೂ ಕೆಲವರು ಮಾತ್ರ ಗರಂ ಆಗಿದ್ದಾರೆ. ದೇವದಾಸ್ ಚಿತ್ರದ ಡೋಲಾ ರೆ ಡೋಲಾ ಹಾಡಿಗೆ ಅದರದ್ದೇ ಆದ ಮಹತ್ವ ಇದ್ದು, ಅದನ್ನು ಈ ರೀತಿಯಾಗಿ ಎಡಿಟ್​ ಮಾಡಿರುವುದು ಸರಿಯಲ್ಲ ಎಂದು ಕೆಲವರು ಕಿಡಿ ಕಾರುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...