alex Certify ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಚಲನ್‌ ಬದಲು ಇಲ್ಲಿ ನಡೆಸಲಾಗುತ್ತೆ ಕೌನ್ಸೆಲಿಂಗ್‌ ಸೆಷನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಚಲನ್‌ ಬದಲು ಇಲ್ಲಿ ನಡೆಸಲಾಗುತ್ತೆ ಕೌನ್ಸೆಲಿಂಗ್‌ ಸೆಷನ್…!

ರಸ್ತೆ ನಿಯಮಗಳನ್ನ ಉಲ್ಲಂಘಿಸಿದವರಿಗೆ ಸಾಮಾನ್ಯವಾಗಿ ಸಂಚಾರ ಇಲಾಖೆ ದಂಡ ವಿಧಿಸಿ, ದಂಡ ಕಟ್ಟುವಂತೆ ಚಲನ್ ನೀಡುತ್ತದೆ. ಆದರೆ ಮುಂಬೈನಲ್ಲಿನ ಪೊಲೀಸರು ಚಲನ್ ಬದಲು ಕೌನ್ಸಿಲಿಂಗೆ ಸೆಷನ್ ಮಾಡ್ತಿದ್ದಾರೆ.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇನಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುವವರಿಗೆ ದೃಶ್ಯ ಸಾಕ್ಷ್ಯಚಿತ್ರ, ರಸ್ತೆ ಸಂಚಾರದ ಕುರಿತು ಪ್ರಶ್ನೋತ್ತರ ಸುತ್ತು ಕೂಲ್ ಡ್ರಿಂಕ್ಸ್ ನೀಡಿ 30-ನಿಮಿಷಗಳ ಕೌನ್ಸೆಲಿಂಗ್ ಸೆಷನ್ ನಡೆಸಲಾಗುತ್ತಿದೆ.

ರಸ್ತೆಯಲ್ಲಿನ ಅಪಘಾತ ಮತ್ತು ಅಪರಾಧಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ರೀತಿ ಹೊಸ ಕ್ರಮ ಕೊಗೊಳ್ಳಲಾಗಿದೆ.
ಡಿಸೆಂಬರ್ 1 ರಿಂದ ಈ ಹೊಸ ಕ್ರಮ ಜಾರಿಗೆ ಬಂದಿದೆ.

ಚಾಲಕರ ಕೌನ್ಸಿಲಿಂಗ್ ಗಾಗಿ ಖಾಲಾಪುರ ಮತ್ತು ತಾಲೇಗಾಂವ್ ಟೋಲ್‌ನಲ್ಲಿ ಮೇಕ್-ಶಿಫ್ಟ್ ಕಂಟೈನರ್‌ಗಳಲ್ಲಿ ಎರಡು ಸಲಹಾ ಕೇಂದ್ರಗಳನ್ನು ರಚಿಸಲಾಗಿದೆ. ಇವುಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಸ್ಪೀಕರ್‌ಗಳು, ಟಿವಿಗಳು ಮತ್ತು ಕಂಪ್ಯೂಟರ್‌ಗಳೊಂದಿಗೆ ಸುಸಜ್ಜಿತವಾಗಿರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...