ರಸ್ತೆ ನಿಯಮಗಳನ್ನ ಉಲ್ಲಂಘಿಸಿದವರಿಗೆ ಸಾಮಾನ್ಯವಾಗಿ ಸಂಚಾರ ಇಲಾಖೆ ದಂಡ ವಿಧಿಸಿ, ದಂಡ ಕಟ್ಟುವಂತೆ ಚಲನ್ ನೀಡುತ್ತದೆ. ಆದರೆ ಮುಂಬೈನಲ್ಲಿನ ಪೊಲೀಸರು ಚಲನ್ ಬದಲು ಕೌನ್ಸಿಲಿಂಗೆ ಸೆಷನ್ ಮಾಡ್ತಿದ್ದಾರೆ.
ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇನಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುವವರಿಗೆ ದೃಶ್ಯ ಸಾಕ್ಷ್ಯಚಿತ್ರ, ರಸ್ತೆ ಸಂಚಾರದ ಕುರಿತು ಪ್ರಶ್ನೋತ್ತರ ಸುತ್ತು ಕೂಲ್ ಡ್ರಿಂಕ್ಸ್ ನೀಡಿ 30-ನಿಮಿಷಗಳ ಕೌನ್ಸೆಲಿಂಗ್ ಸೆಷನ್ ನಡೆಸಲಾಗುತ್ತಿದೆ.
ರಸ್ತೆಯಲ್ಲಿನ ಅಪಘಾತ ಮತ್ತು ಅಪರಾಧಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ರೀತಿ ಹೊಸ ಕ್ರಮ ಕೊಗೊಳ್ಳಲಾಗಿದೆ.
ಡಿಸೆಂಬರ್ 1 ರಿಂದ ಈ ಹೊಸ ಕ್ರಮ ಜಾರಿಗೆ ಬಂದಿದೆ.
ಚಾಲಕರ ಕೌನ್ಸಿಲಿಂಗ್ ಗಾಗಿ ಖಾಲಾಪುರ ಮತ್ತು ತಾಲೇಗಾಂವ್ ಟೋಲ್‌ನಲ್ಲಿ ಮೇಕ್-ಶಿಫ್ಟ್ ಕಂಟೈನರ್‌ಗಳಲ್ಲಿ ಎರಡು ಸಲಹಾ ಕೇಂದ್ರಗಳನ್ನು ರಚಿಸಲಾಗಿದೆ. ಇವುಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಸ್ಪೀಕರ್‌ಗಳು, ಟಿವಿಗಳು ಮತ್ತು ಕಂಪ್ಯೂಟರ್‌ಗಳೊಂದಿಗೆ ಸುಸಜ್ಜಿತವಾಗಿರುತ್ತವೆ.