alex Certify ಸ್ಪಿತಿ ಕಣಿವೆಯ ಡ್ರೋನ್​ ನೋಟ; ಅದ್ಬುತ ಫೋಟೋ ಹಂಚಿಕೊಂಡ ರಾಜತಾಂತ್ರಿಕ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪಿತಿ ಕಣಿವೆಯ ಡ್ರೋನ್​ ನೋಟ; ಅದ್ಬುತ ಫೋಟೋ ಹಂಚಿಕೊಂಡ ರಾಜತಾಂತ್ರಿಕ ಅಧಿಕಾರಿ

ನಾರ್ವೇಯನ್​ ರಾಜತಾಂತ್ರಿಕ ಎರಿಕ್​ ಸೋಲ್ಹೈಮ್​ ಭಾರತದ ಸೌಂದರ್ಯದಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ ಮತ್ತು ದೇಶಾದ್ಯಂತದ ಇರುವ ಅದ್ಬುತ ಸ್ಥಳಗಳನ್ನು ಒಳಗೊಂಡಿರುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಸೆಪ್ಟೆಂಬರ್​ 29 ರಂದು, ಅವರು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ನೋಟವನ್ನು ಹಂಚಿಕೊಂಡಿದ್ದು, ಅದು ಡ್ರೋನ್​ನಿಂದ ಕ್ಲಿಕ್​ ಮಾಡಲಾಗಿದೆ.

ಎರಿಕ್​ ಸೋಲ್ಹೈಮ್​ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಡ್ರೋನ್​ ನೋಟವು ಕಲ್ಲಿನ ಭೂಪ್ರದೇಶ, ಕಡು ನೀಲಿ ಆಕಾಶ ಮತ್ತು ಅಂಕುಡೊಂಕಾದ ರಸ್ತೆಯನ್ನು ಸೆರೆಹಿಡಿದುಕೊಟ್ಟಿದೆ. ಬಂಡೆಗಳ ನಡುವೆ ಹರಿಯುವ ನದಿಯನ್ನೂ ಅದು ಸೆರೆಹಿಡಿದಿದೆ. ಇವುಗಳ ಸೊಗಸು ಅಭೂತಪೂರ್ವವಾಗಿದೆ.

“ಮಂಗಳದಲ್ಲಿ ಸವಾರಿ. ಸ್ಪಿತಿ ಹಿಮಾಚಲ ಪ್ರದೇಶ. ಇನ್ಕ್ರೆಡಿಬಲ್​ ಇಂಡಿಯಾ” ಎಂದು ಸೋಲ್ಹೈಮ್​ ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಂತ್ರಮುಗ್ಧರಾಗಿದ್ದು, ತಮ್ಮ ಅನಿಸಿಕೆಯನ್ನು ಕಾಮೆಂಟ್​ ವಿಭಾಗದಲ್ಲಿ ಹಾಕಿದ್ದಾರೆ. ಪೇಂಟಿಂಗ್​ ರೀತಿ ಕಾಣುತ್ತದೆ, ಈ ಭೂ ಭಾಗ ಮಾಂತ್ರಿಕವಾಗಿವೆ ಎಂಬಿತ್ಯಾದಿ ಅಭಿಪ್ರಾಯ ಬಂದಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...