alex Certify ಆಟಿಕೆ ಗನ್​ ತೋರಿಸಿ ಕಾರು ಅಪಹರಿಸಿದ ಭೂಪರು…​..! ಇಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿದಂತೆ ಐವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಿಕೆ ಗನ್​ ತೋರಿಸಿ ಕಾರು ಅಪಹರಿಸಿದ ಭೂಪರು…​..! ಇಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿದಂತೆ ಐವರು ಅರೆಸ್ಟ್

ಆಟಿಕೆ ಪಿಸ್ತೂಲ್​​ ಬಳಸಿ ಇಂಜಿನಿಯರಿಂಗ್​ ವಿದ್ಯಾರ್ಥಿ ಸೇರಿದಂತೆ ಐವರು ಕಾರು ತೆಗೆದುಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಟಿಕೆ​ ಗನ್​ ಬಳಕೆ ಮಾಡಿ ಕಾರು ಚಾಲಕನನ್ನು ಬೆದರಿಸಿದ ಐವರು ಕಾರನ್ನು ಅಪಹರಿಸಿದ್ದಾರೆ. ಇದರಲ್ಲಿ ಓರ್ವ ಬಿಟೆಕ್​ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಮತ್ತೊಬ್ಬ ಜಸ್ಟ್​ ಡಯಲ್​​ನ ಮಾಜಿ ಉದ್ಯೋಗಿಯಾಗಿದ್ದ ಎನ್ನಲಾಗಿದೆ.

ಪ್ರಕರಣ ಸಂಬಂಧ ನಾಲ್ಕು ದಿನಗಳ ಹಿಂದೆ ಸೆಕ್ಟರ್​ 58ರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪಿಸ್ತೂಲ್​ ಗನ್​ಪಾಯಿಂಟ್​ ಹಿಡಿದು ಬೆದರಿಸಿ ನನ್ನ ಕಾರನ್ನು ತೆಗದುಕೊಂಡು ಹೋಗಿದ್ದಾರೆ ಎಂದು ಚಾಲಕ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ ವೇಳೆ ಐವರು ಆರೋಪಿಗಳು ಗನ್​ ಆಕಾರದ ಗ್ಯಾಸ್​ ಲೈಟರ್​ ಹಿಡಿದು ಬೆದರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಮಾತನಾಡಿದ ನೋಯ್ಡಾ ಡಿಸಿಪಿ ರಾಜೇಶ್​ ಎಸ್​, ಪ್ರಕರಣ ದಾಖಲಾಗುತ್ತಿದ್ದಂತೆಯೇ ಮೊದಲು ಸಿ ಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದೆವು. ಇಲ್ಲಿ ನಮಗೆ ಆರೋಪಿಗಳ ಗುರುತು ಪತ್ತೆಯಾಯ್ತು. ಯುವಕರ ಗುಂಪು ಅದೇ ದಿನ ಸಂಜೆ ಇನ್ನೊಂದು ಕಾರನ್ನು ಇದೇ ರೀತಿ ಅಪಹರಿಸಲು ಮುಂದಾಗಿ ಅಸಫಲವಾಗಿತ್ತು. ಇದಾದ ಬಳಿಕ ಐ 20 ಕಾರು ಬರುತ್ತಿದ್ದಂತೆಯೇ ಆಟಿಕೆ ಗನ್​ ತೋರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದ್ರು.
ಬಂಧಿತರನ್ನು ವಿಕಾಸ್​, ಕಾರ್ತಿಕ್​, ಯುವರಾಜ್​ ವಿನಾಯಕ್​, ಅಭಿಷೇಕ್​ ಶರ್ಮಾ ಹಾಗೂ ಶಿವಂ ವಾಲ್ಮಿಕಿ ಎಂದು ಗುರುತಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...