ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಗೌರವಕ್ಕೆ ಅಮೆರಿಕದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಹಾಗೂ ಆರ್ಡೆಮ್ ಪಟಪೂಟಿಯನ್ ಪಾತ್ರರಾಗಿದ್ದಾರೆ.
ತಾಪಮಾನ ಹಾಗೂ ಸ್ಪರ್ಶಕ್ಕಾಗಿ ರೆಸೆಪ್ಟರ್ಗಳನ್ನು ಕಂಡು ಹಿಡಿದ ಕಾರಣಕ್ಕೆ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನೊಬೆಲ್ ಕಮಿಟಿಯ ಸೆಕ್ರೆಟರಿ ಜನರಲ್ ಥೋಮಸ್ ಪರ್ಲ್ಮನ್ ವಿಜೇತರ ಹೆಸರುಗಳನ್ನು ಇಂದು ಘೋಷಣೆ ಮಾಡಿದ್ದಾರೆ.
ʼನೊಬೆಲ್ʼ ಬಹುಮಾನದ ಕುರಿತು ನಿಮಗೆ ತಿಳಿದಿರಲಿ ಈ ಇಂಟ್ರಸ್ಟಿಂಗ್ ಮಾಹಿತಿ
ಶಾಖ ಶೀತ ಹಾಗೂ ಸ್ಪರ್ಶವನ್ನು ಗ್ರಹಿಸಲು ನಮಗಿರುವ ಶಕ್ತಿಯು ನಿಜಕ್ಕೂ ತುಂಬಾ ಅವಶ್ಯಕವಾಗಿದೆ. ಇದು ನಮಗೆ ಸುತ್ತಲಿನ ಪ್ರಪಂಚದ ಜೊತೆ ಸಂವಹನ ನಡೆಸಲು ಸಹಕಾರಿಯಾಗಿದೆ. ಆದರೆ ತಾಪಮಾನ ಮತ್ತು ಒತ್ತಡವನ್ನು ಗ್ರಹಿಸಲು ನರ ಪ್ರಚೋದನೆಗಳನ್ನು ಹೇಗೆ ಪ್ರಾರಂಭಿಸಲಾಗುತ್ತದೆ ? ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರು ಈ ಗೊಂದಲಕ್ಕೆ ಪರಿಹಾರ ನೀಡಿದ್ದಾರೆ. ದೈನದಿಂದ ಜೀವನದಲ್ಲಿ ಈ ಗ್ರಹಿಸುವ ಸಾಮರ್ಥ್ಯವನ್ನು ನಾವು ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಭಾವಿಸಿಬಿಡುತ್ತೇವೆ ಎಂದು ನೋಬೆಲ್ ತೀರ್ಪುಗಾರರು ಹೇಳಿದ್ದಾರೆ.
ʼನೊಬೆಲ್ʼ ಪ್ರಶಸ್ತಿ ವಿಜೇತ ವಿಜ್ಞಾನಿಯ ಸ್ವಾರಸ್ಯಕರ ಸಂಗತಿ 11 ವರ್ಷಗಳ ಬಳಿಕ ಬಹಿರಂಗ
ಜೂಲಿಯಸ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿದ್ದಾರೆ. ಪಟಪೂಟಿಯನ್ ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ರಿಸರ್ಚ್ನ ಉಪನ್ಯಾಸಕರಾಗಿದ್ದಾರೆ. ಇವರಿಬ್ಬರು ನೊಬೆಲ್ ಪ್ರಶಸ್ತಿಯ ಜೊತೆ ಬರುವ 1.1 ಮಿಲಿಯನ್ ಡಾಲರ್ ಮೊತ್ತಕ್ಕೆ ಸಮಾನ ಹಕ್ಕುದಾರರಾಗಿದ್ದಾರೆ.