ಮದುವೆಯಲ್ಲಿ ಕಾರು ಇಲ್ಲದ ಕಾರಣ ವಧು-ವರರಿಗೆ ಪಲ್ಲಕ್ಕಿ ಬಳಸಲಾಗಿತ್ತು. ಪತ್ನಿಯ ಜೊತೆ ಕಾರಿನ ಬದಲಾಗಿ ಬೈಸಿಕಲ್ ಮುಖಾಂತರ ಇವರು ಪಯಣಿಸಿದ್ದು, ವಿವಿಧ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಜಾಗತಿಕ ಎಚ್ಚರಿಕೆಯ ಆತಂಕದ ನಡುವೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಅವರು ಈ ರೀತಿಯ ಸಂದೇಶ ಕಳುಹಿಸಲು ನಿರ್ಧರಿಸಿದ್ದರು. ನೆಟ್ಟಿಗರು ಕೂಡ ಪೊಲೀಸ್ ಅಧಿಕಾರಿಯ ಪರಿಸರ ಕಾಳಜಿಯನ್ನು ಕೊಂಡಾಡಿದ್ದಾರೆ.
ಸಂತೋಷ್ ಪಟೇಲ್ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಅಜಯ್‌ಗಢ್‌ನ ದೇವ್ ಗ್ರಾಮದ ನಿವಾಸಿಯಾಗಿದ್ದು, ನವೆಂಬರ್ 29 ರಂದು ಬುಂದೇಲಿ ಸಂಪ್ರದಾಯದ ಪ್ರಕಾರ ಅವರ ಮದುವೆ ನಡೆಯಿತು.
ಮದುವೆಯ ಸಮಯದಲ್ಲಿ ಎಲ್ಲಾ ವಿಧಿವಿಧಾನಗಳು ಸರಳ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ಹೆಚ್ಚು ಅಬ್ಬರವಿಲ್ಲದೆ ನಡೆಸಲಾಯಿತು.