alex Certify ಡಿಸೆಂಬರ್​ ತಿಂಗಳಾಂತ್ಯದಲ್ಲಿ ದೇಶದ ಸಂಪೂರ್ಣ ಜನತೆಗೆ ಕೊರೊನಾ ಲಸಿಕೆ – ICMR | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್​ ತಿಂಗಳಾಂತ್ಯದಲ್ಲಿ ದೇಶದ ಸಂಪೂರ್ಣ ಜನತೆಗೆ ಕೊರೊನಾ ಲಸಿಕೆ – ICMR

ಜುಲೈ ಅಥವಾ ಆಗಸ್ಟ್​ ತಿಂಗಳ ಮೊದಲಾರ್ಧದಲ್ಲಿ ನಾವು ಪ್ರತಿದಿನಕ್ಕೆ 1 ಕೋಟಿ ಜನರಿಗೆ ಲಸಿಕೆಯನ್ನ ಪೂರೈಸುತ್ತೇವೆ ಎಂದು ಐಸಿಎಂಆರ್​​ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆಯ ಅಭಾವವವಿಲ್ಲ ಎಂದು ಹೇಳಿದ ಡಾ. ಭಾರ್ಗವ, ಡಿಸೆಂಬರ್​ ತಿಂಗಳ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದೆ ಎಂಬ ಕೇಂದ್ರದ ಮಾತನ್ನ ಪುನರುಚ್ಛರಿಸಿದ್ರು.

ದೇಶದಲ್ಲಿ ಕೊರೊನಾ ಲಸಿಕೆಗೆ ಯಾವುದೇ ಕೊರತೆ ಇಲ್ಲ. ಅಮೆರಿಕಕ್ಕೆ ಹೋಲಿಸಿದ್ರೆ ನಮ್ಮ ದೇಶದ ಜನಸಂಖ್ಯೆ 4 ಪಟ್ಟು ಹೆಚ್ಚಿದೆ. ಹೀಗಾಗಿ ದೇಶದ ಜನತೆ ತಾಳ್ಮೆಯನ್ನ ಕಾಯ್ದುಕೊಳ್ಳಬೇಕು. ಜುಲೈ ಇಲ್ಲವೇ ಆಗಸ್ಟ್​ ತಿಂಗಳ ಆರಂಭದ ವೇಳೆಯಲ್ಲಿ ದಿನಕ್ಕೆ 1 ಕೋಟಿ ಲಸಿಕೆಯನ್ನ ಜನರಿಗೆ ನೀಡುತ್ತೇವೆ ಎಂದು ಹೇಳಿದ್ರು.

ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ತಮಿಳುನಾಡು, ದೆಹಲಿಯಂತಹ ರಾಜ್ಯಗಳಲ್ಲಿ ಲಸಿಕೆ ಕೊರೆತೆಯಿಂದಾಗಿ ಲಸಿಕೆ ಅಭಿಯಾನವೇ ಬಂದ್​ ಆಗಿದ್ದರೆ ಇನ್ನೂ ಕೆಲ ರಾಜ್ಯಗಳು ಕೊರೊನಾ ಲಸಿಕೆಗಾಗಿ ಜಾಗತಿಕ ಟೆಂಡರ್​ ಕರೆದಿವೆ. ಈ ನಡುವೆ ಸ್ಪುಟ್ನಿಕ್​ ಲೈಟ್​, ಫೈಜರ್​ನಂತಹ ವಿದೇಶಿ ಲಸಿಕೆಗಳು ದೇಶದಲ್ಲಿ ತುರ್ತು ಅನುಮೋದನೆಗಾಗಿ ಕಾಯುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...