ಜುಲೈ ಅಥವಾ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ನಾವು ಪ್ರತಿದಿನಕ್ಕೆ 1 ಕೋಟಿ ಜನರಿಗೆ ಲಸಿಕೆಯನ್ನ ಪೂರೈಸುತ್ತೇವೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಲಸಿಕೆಯ ಅಭಾವವವಿಲ್ಲ ಎಂದು ಹೇಳಿದ ಡಾ. ಭಾರ್ಗವ, ಡಿಸೆಂಬರ್ ತಿಂಗಳ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದೆ ಎಂಬ ಕೇಂದ್ರದ ಮಾತನ್ನ ಪುನರುಚ್ಛರಿಸಿದ್ರು.
ದೇಶದಲ್ಲಿ ಕೊರೊನಾ ಲಸಿಕೆಗೆ ಯಾವುದೇ ಕೊರತೆ ಇಲ್ಲ. ಅಮೆರಿಕಕ್ಕೆ ಹೋಲಿಸಿದ್ರೆ ನಮ್ಮ ದೇಶದ ಜನಸಂಖ್ಯೆ 4 ಪಟ್ಟು ಹೆಚ್ಚಿದೆ. ಹೀಗಾಗಿ ದೇಶದ ಜನತೆ ತಾಳ್ಮೆಯನ್ನ ಕಾಯ್ದುಕೊಳ್ಳಬೇಕು. ಜುಲೈ ಇಲ್ಲವೇ ಆಗಸ್ಟ್ ತಿಂಗಳ ಆರಂಭದ ವೇಳೆಯಲ್ಲಿ ದಿನಕ್ಕೆ 1 ಕೋಟಿ ಲಸಿಕೆಯನ್ನ ಜನರಿಗೆ ನೀಡುತ್ತೇವೆ ಎಂದು ಹೇಳಿದ್ರು.
ದೇಶದಲ್ಲಿ ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ತಮಿಳುನಾಡು, ದೆಹಲಿಯಂತಹ ರಾಜ್ಯಗಳಲ್ಲಿ ಲಸಿಕೆ ಕೊರೆತೆಯಿಂದಾಗಿ ಲಸಿಕೆ ಅಭಿಯಾನವೇ ಬಂದ್ ಆಗಿದ್ದರೆ ಇನ್ನೂ ಕೆಲ ರಾಜ್ಯಗಳು ಕೊರೊನಾ ಲಸಿಕೆಗಾಗಿ ಜಾಗತಿಕ ಟೆಂಡರ್ ಕರೆದಿವೆ. ಈ ನಡುವೆ ಸ್ಪುಟ್ನಿಕ್ ಲೈಟ್, ಫೈಜರ್ನಂತಹ ವಿದೇಶಿ ಲಸಿಕೆಗಳು ದೇಶದಲ್ಲಿ ತುರ್ತು ಅನುಮೋದನೆಗಾಗಿ ಕಾಯುತ್ತಿವೆ.