
ಆದರೆ ಎಷ್ಟೇ ಪಾಠ ಕಲಿತರೂ ಜನತೆಗೆ ಮಾತ್ರ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಕೊರೊನಾ ಕೇಸ್ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಸಿಟಿ ಮಂದಿ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ನ ಹಿಲ್ ಸ್ಟೇಷನ್ನತ್ತ ಪ್ರಯಾಣ ಬೆಳೆಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮನಾಲಿಯಲ್ಲಿ ಕ್ಲಿಕ್ಕಿಸಲಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದಲ್ಲಿ ಮನಾಲಿಯ ಹೋಟೆಲ್, ರೆಸ್ಟಾರೆಂಟ್ ಸೇರಿದಂತೆ ಹಲವೆಡೆ ಜನರು ಸಾಮಾಜಿಕ ಅಂತರ ಮರೆತದ್ದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು.
ಇದೀಗ ಉತ್ತರಾಖಂಡ್ನಲ್ಲಿ ಇಂತದ್ದೇ ಘಟನೆಯೊಂದು ನಡೆದಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಮಸ್ಸೂರಿಯ ಕೆಂಪ್ಟಿ ಜಲಪಾತದಲ್ಲಿ ಕಿಕ್ಕಿರಿದು ಸೇರಿದ ಜನತೆ ಜಲಪಾತದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಈ ವಿಡಿಯೋವನ್ನ ನೋಡುತ್ತಿದ್ದ ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿರೋದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮಾಸ್ಕ್ಗಳನ್ನ ಧರಿಸದೇ ಸಾಮಾಜಿಕ ಅಂತರವನ್ನ ಕಾಪಾಡದೇ ಪ್ರವಾಸಿಗರು ಬೇಜವಾಬ್ದಾರಿತನವನ್ನ ಪ್ರದರ್ಶಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇದೀಗ ಏಕಕಾಲಕ್ಕೆ 50 ಮಂದಿಗೆ ಮಾತ್ರ ಪ್ರವೇಶ ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.