ಕೋವಿಡ್‌ನ ಹೊಸ ರೂಪಾಂತರಿ ಒಮಿಕ್ರಾನ್ ಕೊಡುತ್ತಿರುವ ಮೂರನೇ ಅಲೆಯ ಕಾಟದಿಂದಾಗಿ ಈ ವರ್ಷವೂ ಗಣರಾಜ್ಯೋತ್ಸವ ಸಂಭ್ರಮವನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ.
ಇದರ ಪರಿಣಾಮ ಲಾಲ್‌ಬಾಗ್‌ನಲ್ಲಿ ಸತತ ಎರಡನೇ ವರ್ಷದ ಗಣರಾಜ್ಯೋತ್ಸವದಂದು ಫಲ ಪುಷ್ಪ ಪ್ರದರ್ಶನ ಇರುವುದಿಲ್ಲ. ರಾಜ್ಯ ಸರ್ಕಾರವು ಕೋವಿಡ್ ಸಂಬಂಧ ಹೊಸ ನಿರ್ಬಂಧಗಳನ್ನು ತಂದಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಿದೆ.
ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಜನವರಿಯಲ್ಲಿ ಭಾರಿ ರಜೆ – ವ್ಯವಹಾರಗಳಿಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ
ಇದೇ ಅವಧಿಯಲ್ಲಿ ಬಂದು ಹೋದ ಎರಡು ಗಣರಾಜ್ಯೋತ್ಸವಗಳ ಅವಧಿಯಲ್ಲೂ ಸಹ ಫಲಪುಷ್ಪ ಪ್ರದರ್ಶನ ಆಯೋಜನೆಯನ್ನು ತೋಟಗಾರಿಕಾ ಇಲಾಖೆ ರದ್ದು ಮಾಡಿತ್ತು.
ಸ್ವಾತಂತ್ರ‍್ಸೋತ್ಸವದ ಅಮೃತ ಮಹೋತ್ಸವದ ಥೀಂನಲ್ಲಿ ಫಲಪುಷ್ಪ ಪ್ರದರ್ಶನದ ಯೋಜನೆ ಇತ್ತಾದರೂ ಅಕ್ಟೋಬರ್ 29ರಂದು ಕರುನಾಡಿಗೆ ಶಾಕ್ ಕೊಟ್ಟ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಕಾರಣ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಥೀಂ ಒಂದನ್ನು ಪ್ಲಾನ್ ಮಾಡಲಾಗಿತ್ತು.
ಎಂದಿನಂತೆ ಗಾಜಿನ ಮನೆಯ ಬದಲಿಗೆ ಈ ಬಾರಿ ಉದ್ಯಾನದ ಆವರಣದಲ್ಲೆಲ್ಲಾ ಫಲಪುಷ್ಪ ಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಇವೆಲ್ಲಾ ಯೋಜನೆಗಳು ಕೋವಿಡ್‌ನಿಂದಾಗಿ ಪೇಪರ್ ಮೇಲೆಯೇ ಉಳಿಯುವಂತಾಗಿದೆ.