ಆರೋಗ್ಯ ಕಾರಣದಿಂದಾಗಿ ರಾಜಕೀಯ ಜೀವನದಿಂದ ದೂರ ಸರಿದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ತಮ್ಮ ರಾಜಕೀಯ ಜೀವನದ ಬಗ್ಗೆ ಅಧಿಕೃತ ಘೋಷಣೆಯನ್ನ ಹೊರಡಿಸಿದ್ದಾರೆ. ಇನ್ನೆಂದೂ ತಾವು ರಾಜಕೀಯ ಜೀವನಕ್ಕೆ ಮರಳೋದಿಲ್ಲ ಎಂಬ ಅಧಿಕೃತ ಹೇಳಿಕೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರಜಿನಿಕಾಂತ್ ಸ್ಥಾಪಿತ ಮಕ್ಕಳ್ ಮಂಡ್ರಮ್ ಪಕ್ಷವನ್ನ ರಜನಿಕಾಂತ್ ವಿಸರ್ಜನೆ ಮಾಡಿದ್ದಾರೆ. ಈ ಪಕ್ಷವು ಇನ್ಮುಂದೆ ಫ್ಯಾನ್ಸ್ ಕ್ಲಬ್ ಆಗಿ ಮುಂದುವರಿಯಲಿದೆ. ನಾನು ಮತ್ತೆ ರಾಜಕೀಯಕ್ಕೆ ಎಂಟ್ರಿ ಕೋಡೋದಿಲ್ಲ ಎಂದು ತಲೈವಾ ಸ್ಪಷ್ಟನೆ ನೀಡಿದ್ದಾರೆ .
ಕಳೆದ ವರ್ಷ ಡಿಸೆಂಬರ್ ಮೂರನೇ ತಾರೀಖಿನಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ 2021 ಜನವರಿಯಲ್ಲಿ ತಮ್ಮ ಪಕ್ಷವನ್ನ ಆರಂಭಿಸೋದಾಗಿ ಹೇಳಿಕೆ ನೀಡಿದ್ದರು. ಆದರೆ ಡಿಸೆಂಬರ್ ಕೊನೆಯವಾರದಲ್ಲೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸೋದಿಲ್ಲ ಎಂದು ಹೇಳಿಕೆ ನೀಡಿದ್ದರು. ರಜನಿಕಾಂತ್ರ ಈ ಹೇಳಿಕೆ ಬಳಿಕ ಮಕ್ಕಳ್ ಮಂಡ್ರಂ ಪಕ್ಷದ ಅನೇಕರು ಡಿಎಂಕೆ ಸೇರಿದಂತೆ ವಿವಿಧ ಪಕ್ಷಕ್ಕೆ ಸೇರಿದ್ದರು.