alex Certify ʼಇಡೀ ಜಗತ್ತಿನ ಅಧಿಪತಿ ರಷ್ಯಾʼ ; ಪುಟಿನ್ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಡೀ ಜಗತ್ತಿನ ಅಧಿಪತಿ ರಷ್ಯಾʼ ; ಪುಟಿನ್ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ವೈರಲ್…!

ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆಯ ಹೆಚ್ಚುತ್ತಿದೆ. ಈ ಮಧ್ಯೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಬಲ್ಗೇರಿಯಾದ ಬಾಬಾ ವಂಗಾ ನುಡಿದ ಭವಿಷ್ಯ ಜಗತ್ತಿನೆಲ್ಲೆಡೆ ವೈರಲ್ ಆಗುತ್ತಿದೆ.

26 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಬಾಬಾ ವಂಗಾ ಈಗಲೂ ಹಲವಾರು ವಿಚಾರಗಳಿಂದ ಹೆಸರುವಾಸಿಯಾಗಿದ್ದಾರೆ.‌ ಕಣ್ಣು ಕಾಣದೆ ಕುರುಡಿಯಾಗಿದ್ದ ಆಕೆ ನುಡಿದ ಹಲವು ಭವಿಷ್ಯವಾಣಿಗಳು ಸತ್ಯವಾಗಿವೆ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಆಕೆ ರಷ್ಯಾ ಹಾಗೂ ಅದರ ಮುಖ್ಯಸ್ಥನ ಬಗ್ಗೆ ನುಡಿದ ಮಾತುಗಳು ಸತ್ಯವಾಗುತ್ತಿವೆ ಎಂಬುದು ಹಲವರ ಅಭಿಪ್ರಾಯ.

ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಹಿಂದೆ ಬಾಬಾ ವಂಗಾ ಬರಹಗಾರ ವ್ಯಾಲೆಂಟಿನ್ ಸಿಡೊರೊವ್‌ಗೆ ರಷ್ಯಾ ‘ವಿಶ್ವದ ಅಧಿಪತಿ’ ಆಗಲಿದೆ ಮತ್ತು ಯುರೋಪ್ ಪಾಳು ಭೂಮಿ ಆಗಲಿದೆ ಎಂದು ಹೇಳಿದ್ದರಂತೆ.

ರಷ್ಯಾದ ಬಲ ಕುಗ್ಗುತ್ತಿದೆ, ಅದು ಈಗ ನಮಗೆ ಹೆದರಲು ಆರಂಭಿಸಿದೆ ಎಂದ ಉಕ್ರೇನ್​….!

ಎಲ್ಲವೂ ಮಂಜುಗಡ್ಡೆಯಂತೆಯೇ ಕರಗುತ್ತದೆ, ಒಬ್ಬರು ಮಾತ್ರ ಗಟ್ಟಿಯಾಗಿ ಉಳಿಯುತ್ತಾರೆ ಅದು, ವ್ಲಾಡಿಮಿರ್‌ನ ಘನತೆ, ರಷ್ಯಾದ ವೈಭವ,” ಎಂದು 1979ರಲ್ಲಿಯೇ ಬಾಬಾ ವಂಗಾ ಹೇಳಿದ್ದರು. ಈಗ ಇಡೀ ವಿಶ್ವದಲ್ಲಿ ರಷ್ಯಾ ಸೃಷ್ಟಿಸುತ್ತಿರುವ ಸಂಚಲನಗಳು ವಂಗಾ ಮಾತು ನಿಜವೇ ಎನ್ನುವ ಅನುಮಾನಗಳನ್ನ ಹುಟ್ಟಿಹಾಕಿದೆ.

“ಯಾರೂ ರಷ್ಯಾವನ್ನು ತಡೆಯಲು ಸಾಧ್ಯವಿಲ್ಲ,” ಎಂದು ಈಕೆ ಹೇಳಿದ್ದಾರೆಂದು ನಂಬಲಾಗಿದೆ. ಪುಟಿನ್ 1999ರ ಡಿಸೆಂಬರ್‌ನಲ್ಲಿ ರಷ್ಯಾದ ಕಾರ್ಯಾಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡ ನಂತರ ಅವರು ರಷ್ಯಾದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ವಿಶ್ವ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ವಿಶ್ವನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ವರದಿಯ ಪ್ರಕಾರ ಬಾಬಾ ವಂಗಾ, ರಷ್ಯಾದ ಬಗ್ಗೆ ಮತ್ತಷ್ಟು ವಿಚಾರಗಳನ್ನ ನುಡಿದಿದ್ದಾರೆ. ಪುಟಿನ್ ಎಲ್ಲಾ ಅಡೆತಡೆಗಳನ್ನು ತನ್ನ ದಾರಿಯಿಂದ ತೆಗೆದುಹಾಕಿ, ತನ್ನ ದೇಶವನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಜಗತ್ತಿಗೆ ಅಧಿಪತಿಯಾಗುತ್ತಾರೆಂದು ವಂಗಾ ನುಡಿದಿದ್ದಾರೆ.

ಬಾಬಾ ವಂಗಾ ಅವರ ಮೂಲ ಹೆಸರು, ವ್ಯಾಂಜೆಲಿಯಾ ಗುಶ್ಟೆರೋವಾ. ಈಕೆ ತನ್ನ 12 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು, ಅದೇ ಸಮಯದಲ್ಲಿ ಈಕೆಗೆ ಭವಿಷ್ಯವನ್ನು ನೋಡುವ ಉಡುಗೊರೆಯನ್ನು ದೇವರು ನೀಡಿದ್ದ ಎಂದು ಹೇಳಿಕೊಂಡಿದ್ದಾರೆ. ಸೋವಿಯತ್ ಒಕ್ಕೂಟದ ವಿಸರ್ಜನೆ, 2001 , 9/11 ದಾಳಿ, ರಾಜಕುಮಾರಿ ಡಯಾನಾ ಸಾವು ಮತ್ತು ಚೆರ್ನೋಬಿಲ್ ದುರಂತದ ಬಗ್ಗೆ ಆಕೆ ನುಡಿದಿದ್ದ ಭವಿಷ್ಯವಾಣಿ ನಿಜವಾಗಿವೆ ಎಂಬುದು ಗಮನಾರ್ಹ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...