ವೇತನ ಮತ್ತು ಪಿಂಚಣಿ ಸೌಲಭ್ಯ ಕುರಿತು 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಅನುಷ್ಠಾನವು ಕಳೆದೆರಡು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಲಾಭದಾಯಕವಾಗಿದೆ ಎಂಬ ಮಾತಿದೆ.
5ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ನೌಕರರು 19 ತಿಂಗಳು ಮತ್ತು ಆರನೇ ವೇತನ ಆಯೋಗದ ಅನುಷ್ಠಾನದ ಸಮಯದಲ್ಲಿ 32 ತಿಂಗಳು ಕಾಯಬೇಕಾಗಿತ್ತು. 2016ರಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದು 6 ತಿಂಗಳೊಳಗೆ ಜಾರಿಗೆ ತರಲಾಗಿದೆ.
ಆನ್‌ಲೈನ್ ವಂಚನೆಗೆ ಒಳಗಾಗುತ್ತಿರುವವರಲ್ಲಿ ಯುವಜನತೆ ಸಂಖ್ಯೆಯೇ ಹೆಚ್ಚು; ಅಧ್ಯಯನದಲ್ಲಿ ಶಾಕಿಂಗ್ ಸಂಗತಿ ಬಹಿರಂಗ
ಇತ್ತೀಚಿನ ಮಾಹಿತಿ ಪ್ರಕಾರ 7ನೇ ವೇತನ ಆಯೋಗದ ನಂತರ ಯಾವುದೇ ಹೊಸ ವೇತನ ಆಯೋಗದ ವ್ಯವಸ್ಥೆ ಇರುವುದಿಲ್ಲ. ನೌಕರರ ವೇತನದ ಅಂಶವನ್ನು ನಿರ್ಧರಿಸುವಲ್ಲಿ ಕೇಂದ್ರ ಸರ್ಕಾರ ಹೊಸ ಸೂತ್ರ ತರುವ ಸಾಧ್ಯತೆ ಹೆಚ್ಚಿದೆ.
ಇನ್ನು ಮುಂದೆ ವೇತನ ಹೆಚ್ಚಳವು ಸಿಬ್ಬಂದಿಯ ಕಾರ್ಯಕ್ಷಮತೆ ಆಧರಿಸುತ್ತದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಮೌಲ್ಯಮಾಪನಕ್ಕೆ ಸಂಬಂಧಿಸಿದ ವಿಧಾನದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ತುಟ್ಟಿಭತ್ಯೆ 50 ಪ್ರತಿಶತ ಮೀರಿದ ನಂತರ ಸಂಬಳದ ಅಂಶ ಸ್ವಯಂಚಾಲಿತವಾಗಿ ಲೆಕ್ಕಾಚಾರ ಮಾಡುವ ಸೂತ್ರ ಬರುವ ಸಾಧ್ಯತೆಗಳಿವೆ. ಬಹುಶಃ ಸ್ವಯಂಚಾಲಿತ ವೇತನ ಪರಿಷ್ಕರಣೆ ಎಂದು ಕರೆಯಬಹುದು.