alex Certify BIG NEWS: ಚೀನಾದಲ್ಲಿ ಶುರುವಾಯ್ತು ಮಂಕಿ ಬಿ ವೈರಸ್​ ಕಾಟ..! ಸೋಂಕಿನ ಲಕ್ಷಣ ಹಾಗೂ ಅಪಾಯಗಳ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೀನಾದಲ್ಲಿ ಶುರುವಾಯ್ತು ಮಂಕಿ ಬಿ ವೈರಸ್​ ಕಾಟ..! ಸೋಂಕಿನ ಲಕ್ಷಣ ಹಾಗೂ ಅಪಾಯಗಳ ಬಗ್ಗೆ ಇಲ್ಲಿದೆ ಮಾಹಿತಿ

No Monkey Business: As China Reports First Monkey B Virus Death, Is the World  Staring at a New Pandemic?

ಮಂಕಿ ಬಿ ವೈರಸ್​ನಿಂದ ಉಂಟಾದ ಮೊದಲ ಮನುಷ್ಯ ಸಾವನ್ನ ಚೀನಾವು ಶನಿವಾರ ವರದಿ ಮಾಡಿದೆ. ಮಾನವರನ್ನ ಹೊರತುಪಡಿಸಿದ ಉಳಿದ ಸಸ್ತನಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದ 53 ವರ್ಷದ ಪಶುವೈದ್ಯಾಧಿಕಾರಿ ಮಂಕಿ ಬಿ ವೈರಸ್​ನಿಂದ ಚೀನಾದಲ್ಲಿ ಸಾವನ್ನಪ್ಪಿದ್ದಾರೆ.

ಮಾರ್ಚ್ ಆರಂಭದಲ್ಲಿ 2 ಮಂಗಗಳಿಂದ ಕಚ್ಚಿಸಿಕೊಂಡ ಬಳಿಕ ಈ ವ್ಯಕ್ತಿಯಲ್ಲಿ ವಾಕರಿಕೆ ಹಾಗೂ ವಾಂತಿಯಂತಹ ಆರಂಭಿಕ ಲಕ್ಷಣಗಳು ಗೋಚರವಾಗಿತ್ತು. ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಈ ಪಶು ವೈದ್ಯ ಮೇ 27ರಂದು ಸಾವನ್ನಪ್ಪಿದ್ದಾರೆ.

ಮಂಕಿ ಬಿ ವೈರಸ್​ ಇತಿಹಾಸ:

1933ರಲ್ಲಿ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೋತಿ ಕೈಯಲ್ಲಿ ಕಚ್ಚಿಸಿಕೊಂಡಿದ್ದರು. ಈ ಗಾಯದಿಂದ ಚೇತರಿಸಿಕೊಂಡಿದ್ದ ವ್ಯಕ್ತಿಯಲ್ಲಿ ಮಂಕಿ ಬಿ ವೈರಸ್​ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಇದು ವಿಶ್ವದ ಮೊದಲ ಮಂಕಿ ಬಿ ವೈರಸ್​ ಪ್ರಕರಣವಾಗಿದೆ. ಜ್ವರ ಹಾಗೂ ಹಾಗೂ ಮೈಲಿಟಿಸ್​ನ ಲಕ್ಷಣಗಳನ್ನ ಹೊಂದಿದ್ದರು. ಕೇಂದ್ರ ನರಮಂಡಲದಲ್ಲಿ ಸೋಂಕು ಕಾಣಿಸಿಕೊಂಡ 15 ದಿನಗಳ ಬಳಿಕ ಈ ವ್ಯಕ್ತಿ ಸಾವನ್ನಪ್ಪಿದ್ದರು.

ಈ ಕಾಯಿಲೆಯು ಹೇಗೆ ಹರಡುತ್ತದೆ..?

ಈ ಕಾಯಿಲೆಯು ನೇರ ಸಂಪರ್ಕ ಹಾಗೂ ಎಂಜಲು, ರಕ್ತದ ಮೂಲಕವೂ ಇನ್ನೊಬ್ಬರಿಗೆ ಹರಡುತ್ತದೆ. 1933ರಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಕಾಣಿಸಿಕೊಂಡ ಬಳಿಕ 2 ಡಜನ್​ಗೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೇ ಕಳೆದ 12 ವರ್ಷಗಳಲ್ಲಿ ಇದೇ ಕಾಯಿಲೆಯಿಂದ ಐದು ಸಾವುಗಳು ಸಂಭವಿಸಿದೆ.

ಈ ವೈರಸ್​ ಎಷ್ಟು ಭಯಾನಕ..?

ಯುಎಸ್​ ನ್ಯಾಷನಲ್​ ಲೈಬ್ರರಿ ಆಫ್​ ಮೆಡಿಸಿನ್​ ನೀಡಿರುವ ವರದಿಗಳ ಪ್ರಕಾರ ಈ ಕಾಯಿಲೆಯು ಕ್ರಮೇಣವಾಗಿ ಮನುಷ್ಯನ ನರಮಂಡಲವನ್ನ ಹಾಳುಮಾಡುತ್ತಾ ಬರುತ್ತದೆ. ಈ ಕಾಯಿಲೆಯು ಶೇಕಡಾ 70-80 ಪ್ರತಿಶತ ಸಾವಿನ ಪ್ರಮಾಣವನ್ನ ಹೊಂದಿದೆ.

ಈ ಕಾಯಿಲೆಯ ಲಕ್ಷಣಗಳೇನು..?

ವೈರಸ್​ ದೇಹಕ್ಕೆ ಎಂಟ್ರಿ ಕೊಟ್ಟ 1ರಿಂದ 3 ವಾರಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಫ್ಲೂನಂತೆಯೇ ಲಕ್ಷಣಗಳನ್ನ ಈ ರೋಗವು ಹೊಂದಿದೆ. ಜ್ವರ, ಮಾಂಸಖಂಡಗಳಲ್ಲಿ ನೋವು, ತಲೆನೋವು, ವಾಂತಿ ಹಾಗೂ ಬಳಲಿಕೆ ಈ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ.

ಈ ಸೋಂಕು ಸಹ ಸಾಂಕ್ರಾಮಿಕ ರೋಗ ಪಟ್ಟಿಯಲ್ಲಿ ಸೇರಿಕೊಳ್ಳುತ್ತದೆಯೇ..?

ಸಾಂಕ್ರಾಮಿಕ ರೋಗದ ಪ್ರಮಾಣಗಳಿಗೆ ಹೋಲಿಕೆ ಮಾಡಿದರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಪ್ರಮಾಣ ತುಂಬಾನೇ ಕಡಿಮೆ ಇದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...