alex Certify ನೀಳವಾದ ರೆಪ್ಪೆಗೂದಲಿನ ಕಾರಣಕ್ಕೆ ಮಹಿಳೆಯಿಂದ ವಿಶ್ವದಾಖಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಳವಾದ ರೆಪ್ಪೆಗೂದಲಿನ ಕಾರಣಕ್ಕೆ ಮಹಿಳೆಯಿಂದ ವಿಶ್ವದಾಖಲೆ…!

ಉದ್ದನೆಯ ರೆಪ್ಪಗೂದಲನ್ನ ಹೊಂದಬೇಕು ಅನ್ನೋ ಆಸೆ ಎಲ್ಲಾ ಮಹಿಳೆಯರಿಗೂ ಇರುತ್ತೆ. ಇದಕ್ಕಾಗಿ ಮಸ್ಕರಾ, ಕಾಜಲ್​ಗಳನ್ನ ಹಚ್ಚಿ ಕೃತಕವಾಗಿ ರೆಪ್ಪೆಗೂದಲಿನ ಸೌಂದರ್ಯವನ್ನ ಹೆಚ್ಚಿಸಿಕೊಳ್ತಾರೆ.

ಆದರೆ ಯು ಜಿಯಾಂಕ್ಸಿಯಾ ಎಂಬ ಮಹಿಳೆಯ ರೆಪ್ಪೆಗೂದಲನ್ನ ನೋಡಿದ್ರೆ ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ..! ಚೀನಾ ಮೂಲದ ಈ ಮಹಿಳೆಯು ವಿಶ್ವದಲ್ಲೇ ಅತ್ಯಂತ ಉದ್ದ ರೆಪ್ಪೆಗೂದಲನ್ನ ಹೊಂದಿರುವ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಗಿನ್ನೆಸ್​ ವಿಶ್ವ ದಾಖಲೆಯು ಈಕೆಯ ವಿಡಿಯೋವನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದೆ. ಈಕೆಯ ರೆಪ್ಪಗೂದಲು 8 ಇಂಚು ಉದ್ದವಿದೆ.

ಈಕೆ 2016ರಲ್ಲಿ ತಾನೇ ಮಾಡಿದ ವಿಶ್ವ ದಾಖಲೆಯನ್ನ ಮುರಿದಿದ್ದಾಳೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಯು ಜಿಯಾಂಕ್ಸಿಯಾ, ಯಾಕೆ ನನ್ನ ರೆಪ್ಪೆಗೂದಲು ಈ ರೀತಿ ಇದೆ ಅನ್ನೋದರ ಬಗ್ಗೆ ನಾನು ಯೋಚನೆ ಮಾಡುತ್ತಲೇ ಇದ್ದೆ. ಬಳಿಕ ನಾನು ಪರ್ವತದಲ್ಲಿ 480 ದಿನಗಳನ್ನ ಕಳೆದಿದ್ದೇನೆ ಎನ್ನೋದು ನೆನಪಾಯ್ತು. ಬಹುಶಃ ಇದು ನನಗೆ ಬುದ್ಧ ನೀಡಿರುವ ಉಡುಗೊರೆಯಾಗಿದೆ ಎಂದು ಹೇಳಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...