ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಜೊತೆಗೆ ಚುನಾವಣೋತ್ತರ ಮೈತ್ರಿಗೆ ಮಾಡಿಕೊಳ್ಳುವ ಆಯ್ಕೆಗೆ ಮುಕ್ತವಾಗಿರುವುದಾಗಿ ಕಾಂಗ್ರೆಸ್ ತಿಳಿಸಿದೆ.
ಆಡಳಿತಾರೂಢ ಬಿಜೆಪಿ ವಿರುದ್ಧ ರಾಜ್ಯದಲ್ಲಿರುವ ದೊಡ್ಡ ಎದುರಾಳಿ ಎನ್ನಲಾದ ಎಸ್‌ಪಿ ಜೊತೆಗೆ ಪರಿಸ್ಥಿತಿ ಬಂದಲ್ಲಿ ಕೈಜೋಡಿಸಲು ತನಗೇನೋ ಸಮಸ್ಯೆ ಇಲ್ಲವೆಂದು ಕಾಂಗ್ರೆಸ್ ತನ್ನ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೂಲಕ ತಿಳಿಸಿದೆ.
ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ
“ಪರಿಸ್ಥಿತಿಗಳು ನಿರ್ಮಾಣವಾದಾಗ ನಾವು ನಿರ್ಧಾರಕ್ಕೆ ಬರುತ್ತೇವೆ, ಆದರೆ ನನಗೆ ಇದರಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಒಂದು ವೇಳೆ ಅಂಥ ಪರಿಸ್ಥಿತಿ ನಿರ್ಮಾಣವಾದಲ್ಲಿ, ಹಾಗೇಕೆ ಮಾಡಬಾರದು?” ಎಂದು ಪ್ರಿಯಾಂಕಾ ತಿಳಿಸಿದ್ದಾರೆ. “ಮಹಿಳೆಯರು ಮತ್ತು ಯುವಕರಿಗೆ ನಮ್ಮ ಅಜೆಂಡಾವನ್ನು ಪರಿಪೂರ್ಣಗೊಳಿಸಿದಲ್ಲಿ ಎನ್ನುವ ಷರತ್ತಿನೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ,” ಎಂದಿದ್ದಾರೆ ಪ್ರಿಯಾಂಕಾ.
2022ರ ಉ.ಪ್ರ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನೆಲ್ಲಾ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದ ಪ್ರಿಯಾಂಕಾ, “ನಾವು ಸರ್ಕಾರ ರಚಿಸಬಲ್ಲೆವೋ ಇಲ್ಲವೋ ಎಂದು ಖಾತ್ರಿ ಇಲ್ಲ, ಆದರೆ ಕಳೆದ ಎರಡೂವರೆ ವರ್ಷಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ತರಬೇತುಗೊಳಿಸಲು ನಮ್ಮ ಪ್ರಯತ್ನಗಳು ಸಾಗಿವೆ. ’ಮೈ ಲಡ್ಕೀ ಹೂಂ, ಲಡ್ ಸಕ್ತೀ ಹೂಂ’ ಘೋಷವು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ರ‍್ಯಾಲಿ ವೇಳೆ ಮೊಳಗುತ್ತಿದೆ” ಎಂದಿದ್ದಾರೆ.