alex Certify ಆರ್ಯನ್‌ ಬಂಧನ ಕುರಿತಂತೆ ಶಾರೂಖ್‌ ಗೆ ಪತ್ರ ಬರೆದಿದ್ದ ರಾಹುಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್‌ ಬಂಧನ ಕುರಿತಂತೆ ಶಾರೂಖ್‌ ಗೆ ಪತ್ರ ಬರೆದಿದ್ದ ರಾಹುಲ್

ಐಷಾರಾಮಿ ಕ್ರೂಸ್‌ಶಿಪ್‌ನಲ್ಲಿ ಗೋವಾಗೆ ತೆರಳುವ ವೇಳೆ ಡ್ರಗ್ಸ್‌ ಪಾರ್ಟಿ ಮಾಡುತ್ತಿದ್ದ ಎಂಬ ಆರೋಪದ ಮೇರೆಗೆ ಇತ್ತೀಚೆಗೆ ಬಾಲಿವುಡ್‌ ’ಬಾದ್‌ಶಾ’ ಶಾರುಖ್‌ ಖಾನ್‌ ಪುತ್ರ ಅರೆಸ್ಟ್‌ ಆಗಿದ್ದ. ಎನ್‌ಸಿಬಿ ಅಧಿಕಾರಿಗಳು ಜಾಮೀನಿಗೆ ತಕರಾರು ಎತ್ತಿದ್ದ ಕಾರಣ, ಕೋರ್ಟ್‌ ಕೂಡ ಸುಮಾರು 20ಕ್ಕೂ ಹೆಚ್ಚು ದಿನಗಳ ಕಾಲ 23 ವರ್ಷದ ಆರ್ಯನ್‌ನನ್ನು ಜೈಲಿಗೆ ಅಟ್ಟಿತ್ತು.

ಕೊನೆಗೆ ಹಿರಿಯ ವಕೀಲರ ತಂಡವು ಹರಸಾಹಸ ಪಟ್ಟು ಬಾಂಬೆ ಹೈಕೋರ್ಟ್‌ನಿಂದ ಆರ್ಯನ್‌ಗೆ ಜಾಮೀನು ಕೊಡಿಸಿ, ಜೈಲಿನಿಂದ ಹೊರತಂದು ಶಾರುಖ್‌ ಬಂಗಲೆ ’ಮನ್ನತ್‌’ಗೆ ತಲುಪಿಸಿದೆ.

ಇದೆಲ್ಲದರ ಹಿಂದೆ ಹಿಂದೂ-ಮುಸ್ಲಿಂ ಕೋಮುಸಂಘರ್ಷ, ರಾಜಕೀಯ ಪಿತೂರಿಗಳು, ಬಾಲಿವುಡ್‌ ತಾರೆಗಳ ಟಾರ್ಗೆಟ್‌, ಶಾರುಖ್‌ನಿಂದ 25 ಕೋಟಿ ರೂ. ವಸೂಲಿಗೆ ಎನ್‌ಸಿಬಿ ಸಂಚು, ಪ್ರೈವೇಟ್‌ ಡಿಟೆಕ್ಟೀವ್‌ಗಳ ಹುನ್ನಾರ ಎಂಬ ಹಲವು ಆಯಾಮಗಳು ಮಾಧ್ಯಮಗಳಲ್ಲಿ ಕೇಳಿಬಂದಿವೆ. ಆರ್ಯನ್‌ನನ್ನು ಬಂಧಿಸಿದ್ದ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಭ್ರಷ್ಟಾಚಾರ, ಮತಾಂತರ, ಸರ್ಕಾರಿ ಕೆಲಸಕ್ಕಾಗಿ ಸುಳ್ಳು ಜಾತಿ ಪ್ರಮಾಣಪತ್ರ ಬಳಕೆಯ ಆರೋಪವನ್ನು ಕೂಡ ಎನ್‌ಸಿಪಿಯ ಹಿರಿಯ ನಾಯಕರು ಹೊರಿಸಿದ್ದಾರೆ.

ವೃದ್ಧರೊಬ್ಬರ ʼಮನಿಕೆ ಮ್ಯಾಗೆ ಹಿತೆʼ ಹಾಡು ಕೇಳಿ ಬಿದ್ದು ಬಿದ್ದು ನಕ್ಕ ಜನ

ಆದರೆ, ಇವೆಲ್ಲದರ ನಡುವೆಯೇ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಶಾರುಖ್‌ ಖಾನ್‌ ದಂಪತಿಗೆ ಆಪ್ತ ಪತ್ರವೊಂದನ್ನು ಬರೆದು ಸಾಂತ್ವನ ಹೇಳಿದ್ದಾರೆ.

’’ ಬಹಳ ಬೇಜಾರಾಗುತ್ತದೆ, ಕ್ಷಮಿಸಿರಿ. ನೀವು ಇಂಥ ಕಷ್ಟಗಳನ್ನು ಅನುಭವಿಸಬೇಕಾಯ್ತು ಎನ್ನುವುದು ನನಗೆ ಅತೀವ ನೋವು ತಂದಿದೆ. ಯಾವೊಬ್ಬ ಮಗುವು ಕೂಡ ಆರ್ಯನ್‌ ಅನುಭವಿಸಿದ ಮಾನಸಿಕ ಯಾತನೆ ಅನುಭವಿಸಕೂಡದು. ಶಾರುಖ್‌ ದಂಪತಿಯು ಜನರಿಗಾಗಿ ಮಾಡಿರುವ ಉತ್ತಮವಾದ ಕೆಲಸಗಳನ್ನು ಕಣ್ಣಾರೆ ಕಂಡಿದ್ದೇನೆ. ನಿಮ್ಮಿಂದ ಸಹಾಯ ಪಡೆದವರ ಆಶೀರ್ವಾದವು ನಿಮ್ಮ ಕುಟುಂಬವನ್ನು ರಕ್ಷಿಸಲಿದೆ. ಆದಷ್ಟು ಶೀಘ್ರ ನಾವೆಲ್ಲರೂ ಒಟ್ಟಾಗಿ ಸಿಗೋಣ,’’ ಎಂದು ರಾಹುಲ್‌ ಅವರು ಪತ್ರದಲ್ಲಿ ಭಾವುಕವಾಗಿ ಸಂದೇಶ ಮುಟ್ಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...