alex Certify ಫೈಜರ್​ ಪ್ರಯೋಗ ಹಂತದಲ್ಲಿ ಅಲರ್ಜಿ ಪ್ರಕರಣ ದಾಖಲಾಗಿಲ್ಲ – ಲಸಿಕೆ ತಯಾರಿಕಾ ಸಂಸ್ಥೆಯಿಂದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೈಜರ್​ ಪ್ರಯೋಗ ಹಂತದಲ್ಲಿ ಅಲರ್ಜಿ ಪ್ರಕರಣ ದಾಖಲಾಗಿಲ್ಲ – ಲಸಿಕೆ ತಯಾರಿಕಾ ಸಂಸ್ಥೆಯಿಂದ ಮಾಹಿತಿ

ಕ್ಲಿನಿಕಲ್​ ಪ್ರಯೋಗಗಳ ಸಂದರ್ಭದಲ್ಲಿ ಫೈಜರ್​ ಲಸಿಕೆಯಿಂದ ಯಾವುದೇ ಸೋಂಕಿತ ರೋಗಿಗೆ ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ಫೈಜರ್​ ಕಾರ್ಯನಿರ್ವಾಹಕ ಮಾಹಿತಿ ನೀಡಿದ್ದಾರೆ.

ಸಂಭಾವ್ಯ ಲಸಿಕೆಯ ಕೊನೆ ಹಂತದಲ್ಲಿ ಪ್ರಯೋಗದಲ್ಲಿ ತೀವ್ರವಾದ ಅಲರ್ಜಿ ಸಮಸ್ಯೆ ಇರುವವರನ್ನೇ ಆಯ್ಕೆ ಮಾಡಲಾಗಿತ್ತು. ಆದರೆ ಯಾರಿಗೂ ಕೂಡ ಲಸಿಕೆ ಪ್ರಯೋಗದ ಬಳಿಕ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ ಅಂತಾ ಫೈಜರ್​ ಲಸಿಕೆ ಕ್ಲಿನಿಕಲ್​ ಸಂಶೋಧನೆ ಹಾಗೂ ಅಭಿವೃದ್ಧಿಯ ಉಪಾಧ್ಯಕ್ಷ ಡಾ. ವಿಲಿಯಂ ಗ್ರೂಬರ್​ ಹೇಳಿದ್ರು.
ಬ್ರಿಟನ್​ನಲ್ಲಿ ಮೊದಲ ಹಂತದಲ್ಲಿ ರೋಗಿಗಳಿಗೆ ಫೈಜರ್​ 2 ಡೋಸ್​ ನೀಡಿದ ಬಳಿಕ ಅನಾಫಿಲ್ಯಾಕ್ಟಾಯ್ಸ್ ಅಲರ್ಜಿ ಕಾಣಿಸಿಕೊಂಡಿತ್ತು. ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಫೈಜರ್​ ಕಾರ್ಯನಿರ್ವಾಹಕ ಸುಸಾರ್​ ಮಾಥನ್, ಲಸಿಕೆಗೆ ಸಂಬಂಧಿಸಿದ ಅನಾಫಿಲ್ಯಾಕ್ಟಿಕಲ್​ ಅಲರ್ಜಿ ಹಿನ್ನಲೆಯನ್ನ ನಾವು ಹೊಂದಿಯೇ ಇರಲಿಲ್ಲ. ಲಸಿಕೆಯ ಕೊನೆ ಹಂತದ ಪ್ರಯೋಗದಲ್ಲಿ ಸುಮಾರು 6000ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇವರಲ್ಲಿ ಅನೇಕರು ಆಹಾರ ಅಲರ್ಜಿಮ ಅನಾಫಿಲ್ಯಾಕ್ಸಿನ್​ ಸಮಸ್ಯೆ ಉಳ್ಳವರೇ ಆಗಿದ್ದರು ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...