ಕ್ಲಿನಿಕಲ್ ಪ್ರಯೋಗಗಳ ಸಂದರ್ಭದಲ್ಲಿ ಫೈಜರ್ ಲಸಿಕೆಯಿಂದ ಯಾವುದೇ ಸೋಂಕಿತ ರೋಗಿಗೆ ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ಫೈಜರ್ ಕಾರ್ಯನಿರ್ವಾಹಕ ಮಾಹಿತಿ ನೀಡಿದ್ದಾರೆ.
ಸಂಭಾವ್ಯ ಲಸಿಕೆಯ ಕೊನೆ ಹಂತದಲ್ಲಿ ಪ್ರಯೋಗದಲ್ಲಿ ತೀವ್ರವಾದ ಅಲರ್ಜಿ ಸಮಸ್ಯೆ ಇರುವವರನ್ನೇ ಆಯ್ಕೆ ಮಾಡಲಾಗಿತ್ತು. ಆದರೆ ಯಾರಿಗೂ ಕೂಡ ಲಸಿಕೆ ಪ್ರಯೋಗದ ಬಳಿಕ ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ ಅಂತಾ ಫೈಜರ್ ಲಸಿಕೆ ಕ್ಲಿನಿಕಲ್ ಸಂಶೋಧನೆ ಹಾಗೂ ಅಭಿವೃದ್ಧಿಯ ಉಪಾಧ್ಯಕ್ಷ ಡಾ. ವಿಲಿಯಂ ಗ್ರೂಬರ್ ಹೇಳಿದ್ರು.
ಬ್ರಿಟನ್ನಲ್ಲಿ ಮೊದಲ ಹಂತದಲ್ಲಿ ರೋಗಿಗಳಿಗೆ ಫೈಜರ್ 2 ಡೋಸ್ ನೀಡಿದ ಬಳಿಕ ಅನಾಫಿಲ್ಯಾಕ್ಟಾಯ್ಸ್ ಅಲರ್ಜಿ ಕಾಣಿಸಿಕೊಂಡಿತ್ತು. ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಫೈಜರ್ ಕಾರ್ಯನಿರ್ವಾಹಕ ಸುಸಾರ್ ಮಾಥನ್, ಲಸಿಕೆಗೆ ಸಂಬಂಧಿಸಿದ ಅನಾಫಿಲ್ಯಾಕ್ಟಿಕಲ್ ಅಲರ್ಜಿ ಹಿನ್ನಲೆಯನ್ನ ನಾವು ಹೊಂದಿಯೇ ಇರಲಿಲ್ಲ. ಲಸಿಕೆಯ ಕೊನೆ ಹಂತದ ಪ್ರಯೋಗದಲ್ಲಿ ಸುಮಾರು 6000ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇವರಲ್ಲಿ ಅನೇಕರು ಆಹಾರ ಅಲರ್ಜಿಮ ಅನಾಫಿಲ್ಯಾಕ್ಸಿನ್ ಸಮಸ್ಯೆ ಉಳ್ಳವರೇ ಆಗಿದ್ದರು ಅಂತಾ ಹೇಳಿದ್ರು.