alex Certify ಗೋವಾ – ಕರ್ನಾಟಕ 4 ಲೇನ್​ ಹೆದ್ದಾರಿ; ಫೋಟೋ ಹಂಚಿಕೊಂಡ ಗಡ್ಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಾ – ಕರ್ನಾಟಕ 4 ಲೇನ್​ ಹೆದ್ದಾರಿ; ಫೋಟೋ ಹಂಚಿಕೊಂಡ ಗಡ್ಕರಿ

ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಹೆದ್ದಾರಿಗಳು ಅಭಿವೃದ್ಧಿಗೊಳ್ಳುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಕರ್ನಾಟಕ – ಗೋವಾ ನಡುವಿನ ಚತುಷ್ಪಥ ರಸ್ತೆಯೂ ಒಂದು.

87 ಕಿಲೋಮೀಟರ್​ ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇದರ ಚಿತ್ರಗಳನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅರೇಬಿಯನ್​ ಸಮುದ್ರ ತೀರ ಮತ್ತು ಇನ್ನೊಂದು ಬದಿಯಲ್ಲಿ ಪಶ್ಚಿಮ ಘಟ್ಟದ ನಡುವೆ ಹಾದು ಬರುವ ಈ ರಸ್ತೆ ಕರಾವಳಿಯ ಭವ್ಯತೆಯನ್ನೂ ಎತ್ತಿ ತೋರಿಸುತ್ತಿದೆ.

ನವ ಭಾರತದ ಅಡಿಪಾಯ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯ ಎಂದು ಕರೆದಿರುವ ಗಡ್ಕರಿ ಈ ಹೆದ್ದಾರಿಯು ಗೋವಾ- ಕರ್ನಾಟಕ ಗಡಿಯನ್ನು ಕುಂದಾಪುರ ಸಂಪರ್ಕಿಸುತ್ತದೆ ಎಂದಿದ್ದಾರೆ.

ಕರಾವಳಿ ಹೆದ್ದಾರಿಯು ಪನ್ವೇಲ್​, ಚಿಪ್ಲುನ್​, ಕಾರವಾರ, ಉಡುಪಿ, ಸುರತ್ಕಲ್​, ರತ್ನಗಿರಿ, ಪಣಜಿ, ಮಾಗೋರ್, ಮಂಗಳೂರು, ಕೋಝಿಕ್ಕೋಡ್​, ಕೊಚ್ಚಿ, ತಿರುವನಂತಪುರಂ ಮತ್ತು ಕನ್ಯಾಕುಮಾರಿ ಸೇರಿ ಹಲವು ಪಟ್ಟಣಗಳನ್ನು ಸಂಪರ್ಕಿಸುತ್ತದೆ.

ಹೆದ್ದಾರಿಯ ಒಟ್ಟು ಕಾಮಗಾರಿಯ 173 ಕಿಲೋಮೀಟರ್​ ಅಥವಾ ಶೇ.92.42ರಷ್ಟು ರ್ಪೂಣಗೊಂಡಿದೆ. ಉಳಿದ ಕೆಲಸ ಶೀಘ್ರವೇ ಮುಗಿಯುವ ನಿರೀಕ್ಷೆ ಇದೆ. ಈಗಾಗಲೇ ಹೆದ್ದಾರಿಯಲ್ಲಿ ಸಂಚಾರ ಮುಕ್ತವಾಗಿದೆ. ಈ ಯೋಜನೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ಅಪಘಾತಗಳನ್ನು ತಡೆಗಟ್ಟುತ್ತದೆ, ವಾಹನದ ನಿರ್ವಹಣಾ ವೆಚ್ಚ ಕಡಿಮೆಯಾಗುವುದು ಮತ್ತು ಸುಗಮ ರಸ್ತೆಯಿಂದಾಗಿ ಇಂಧನ ಉಳಿತಾಯಕ್ಕೆ ಸಹಾಯ ಮಾಡುತ್ತದೆ. ರಾಜ್ಯದೊಳಗಿನ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಸಚಿವರು ಹೇಳಿದರು.

ಕರಾವಳಿ ಪ್ರದೇಶದಲ್ಲಿ ಹೊಸ ವಾಣಿಜ್ಯ ಚಟುವಟಿಕೆ ಮತ್ತು ಕೈಗಾರಿಕೆಗಳಿಗೆ ಅವಕಾಶಗಳು ಸೃಷ್ಟಿಯಾಗಿ, ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ಒದಗಿಸಲಿದೆ. ಸ್ಥಳೀಯ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿದೆ.

ಸರ್ಕಾರದ ದೃಷ್ಟಿಕೋನವನ್ನು ಹಂಚಿಕೊಂಡ ಸಚಿವರು, ಪ್ರತಿಯೊಂದರಲ್ಲೂ “ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಲು ತಮ್ಮ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದರು.

The coastal highway connects major cities and towns along the way including places such as Panvel, Chiplun, Karwar, Udupi, Surathkal, among others.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...