ಹಾವುಗಳ ಹೆಸರು ಕೇಳಿದ್ರೇನೆ ಸಾಕು ಮೈ ಎಲ್ಲಾ ಝುಂ ಎನ್ನುತ್ತೆ. ಅದರಲ್ಲೂ ನಾಗರಹಾವಿನಂತಹ ವಿಷಕಾರಿ ಹಾವುಗಳು ಹತ್ತಿರ ಬಂದರೆ ಕೇಳಬೇಕೆ..?
ಹಾವುಗಳು ಅಂದರೆ ಭಯಗೊಳ್ಳುವ ಜನರ ನಡುವೆಯೇ ಹಾವುಗಳನ್ನ ಸುರಕ್ಷಿತವಾಗಿ ಕಾಡುಗಳಿಗೆ ಬಿಡುವ ಉರಗ ತಜ್ಞರೂ ಸಹ ನಮ್ಮಲ್ಲಿದ್ದಾರೆ. ಆದರೆ ಈ ಕಾರ್ಯವನ್ನ ಸಾಮಾನ್ಯವಾಗಿ ಪುರುಷರೇ ಮಾಡ್ತಾರೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ನಾಗೇಶ್ವರಿ ಎಂಬಾಕೆ ಹಾವನ್ನ ಹಿಡಿದಿರುವ ವಿಡಿಯೋವನ್ನ ಶೇರ್ ಮಾಡಿದ್ದಾರೆ. ನಿರ್ಮಾಣ ಹಂತದ ಕಟ್ಟಡದ ಬಳಿಯಲ್ಲಿ ಈ ಹಾವನ್ನ ನಾಗೇಶ್ವರಿ ರಕ್ಷಿಸಿದ್ದಾರೆ.
ಹಾವಿನ ಬಾಲವನ್ನ ಹಿಡಿದು ಅದನ್ನ ನಾಗೇಶ್ವರಿ ಹೊರ ತೆಗೆಯುತ್ತಾರೆ. ಅದು ಸ್ವಲ್ಪ ಹೊತ್ತು ಮಿಸುಕಾಡುತ್ತದೆ. ಬಳಿಕ ಹಾವು ಕೂಡ ಶಾಂತವಾಗುತ್ತದೆ. ಈಕೆ ಇನ್ಸ್ಟಾ ಖಾತೆಯಲ್ಲಿ ಹಾವುಗಳನ್ನ ರಕ್ಷಿಸುತ್ತಿರುವ ಸಾಕಷ್ಟು ವಿಡಿಯೋಗಳನ್ನ ಶೇರ್ ಮಾಡಿದ್ದಾರೆ.
https://www.instagram.com/p/CPS14ODFzdZ/?utm_source=ig_web_copy_link
https://www.instagram.com/p/CPS14ODFzdZ/?utm_source=ig_web_copy_link