ರಾಷ್ಟ್ರ ರಾಜಧಾನಿ ಸಿಂಘು ಗಡಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಳಿಲು ಸೇವೆ ಮಾಡುವ ಸಲುವಾಗಿ ಎನ್ಜಿಓವೊಂದು ಫೂಟ್ ಮಸಾಜರ್ಗಳನ್ನ ಕಳುಹಿಸಿಕೊಟ್ಟಿದೆ.
ಸಿಂಘು ಗಡಿಯಲ್ಲಿ ವೃದ್ಧ ರೈತರು ಪ್ರತಿಭಟನೆಯಲ್ಲಿ ನಿರತರಾಗಿದ್ದನ್ನ ಕಂಡೆವು. ಅವರು ದಿನವೀಡಿ ಪ್ರತಿಭಟನೆ ನಡೆಸಿ ಸುಸ್ತಾಗಿರಬಹುದು. ಹೀಗಾಗಿ ಅವರಿಗೆ ಕೊಂಚ ಆರಾಮವಾಗಲಿ ಅಂತಾ ಈ ಫೂಟ್ ಮಸಾಜರ್ಗಳನ್ನ ಕಳುಹಿಸಿಕೊಟ್ಟಿದ್ದೇವೆ ಅಂತಾ ಖಲ್ಸಾ ಏಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಮರ್ಪ್ರೀತ್ ಹೇಳಿದ್ರು.
ಈ ಎನ್ಜಿಓಪ್ರಸ್ತುತ 25ಫೂಟ್ ಮಸಾಜರ್ಗಳನ್ನ ಕಳುಹಿಸಿಕೊಟ್ಟಿದೆ ಹಾಗೂ ಸದ್ಯದಲ್ಲೇ ಇನ್ನೂ ಹೆಚ್ಚಿನ ಯಂತ್ರಗಳನ್ನ ಸಿಂಘು ಗಡಿಗೆ ಕಳುಹಿಸಿಕೊಡಲಿದೆ .
ಈ ಎನ್ಜಿಓ ಫೂಟ್ ಮಸಾಜರ್ ಮಾತ್ರವಲ್ಲದೇ 400 ಹಾಸಿಗೆಗಳು , ವಾಟರ್ ಫ್ರೂಫ್ ಟೆಂಟ್ಗಳು, ತಾತ್ಕಾಲಿಕ ಶೌಚಾಲಯಗಳು ಹಾಗೂ ಗೀಸರ್ಗಳನ್ನ ಸ್ಥಾಪಿಸಿಕೊಟ್ಟಿದೆ.