alex Certify ಎರಡು ಕೊಠಡಿಗಳಿಗೆ ಒಂದೇ ಎಸಿ; ಸೂಪರ್‌ ಟ್ರಿಕ್‌ ಗೆ ಭೇಷ್‌ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಕೊಠಡಿಗಳಿಗೆ ಒಂದೇ ಎಸಿ; ಸೂಪರ್‌ ಟ್ರಿಕ್‌ ಗೆ ಭೇಷ್‌ ಎಂದ ನೆಟ್ಟಿಗರು

ಹೋಟೆಲ್‌ನಲ್ಲಿ ಅಸಮರ್ಪಕ ನಿರ್ವಹಣೆ ಅಥವಾ ಅಸಹಕಾರವನ್ನು ಎಲ್ಲರೂ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸುತ್ತಾರೆ. ಟ್ವಿಟ್ಟರ್ ಬಳಕೆದಾರರಾದ ಅನುರಾಗ್ ಅವರು ತಮಗಾದ ಅನುಭವವನ್ನು ನೆಟ್ಟಿಗರ ಮುಂದೆ ಹಂಚಿಕೊಂಡಿದ್ದು, ಅವರು ಅನುಭವಿಸಿದ ಘಟನೆ ನಿಜಕ್ಕೂ ಕ್ರೇಜಿ ಎನಿಸುತ್ತದೆ‌.

ಮುಂಬೈನ ಹೋಟೆಲ್‌ನಲ್ಲಿ ಹವಾನಿಯಂತ್ರಿತ ಕೊಠಡಿ ಸಿಗುತ್ತದೆ ಎಂಬ ಭರವಸೆಯಿಂದ ತಂಗಿದ್ದ ಅನುಭವವನ್ನು ಅವರು ಫೋಟೋ ಸಹಿತ ಹಂಚಿಕೊಂಡಿದ್ದಾರೆ.

ಅನುರಾಗ್‌ಗೆ ಸ್ಪ್ಲಿಟ್ ಎಸಿ ಇರುವ ಕೋಣೆ ಸಿಕ್ಕಿತಾದರೂ, ಆಶ್ಚರ್ಯಕರವಾಗಿ ಎರಡು ಪ್ರತ್ಯೇಕ ಕೊಠಡಿಗಳಿಗೆ ಸೇವೆ ಒದಗಿಸುವ ರೀತಿಯಲ್ಲಿ ಎಸಿ ಅಳವಡಿಸಲಾಗಿತ್ತು. ಎರಡು ಕೊಠಡಿಗಳ ನಡುವೆ ಗೋಡೆಯಲ್ಲಿ ರಂಧ್ರವನ್ನು ಮಾಡಲಾಗಿದ್ದು, ಒಂದು ಎಸಿ ಘಟಕ ಎರಡೂ ಕೊಠಡಿಗಳನ್ನು ಏಕಕಾಲದಲ್ಲಿ ಕೂಲ್ ಆಗಿಸುತ್ತಿತ್ತು‌.

2011 ರಲ್ಲಿ ಮುಂಬೈನಲ್ಲಿ ಈ ಕೊಠಡಿಯನ್ನು ಬುಕ್ ಮಾಡಿದ್ದೆ, ಅಲ್ಲಿ ವ್ಯವಸ್ಥಾಪಕರು ಎಸಿ ಕೊಠಡಿಯನ್ನು ನೀಡುವುದಾಗಿ ಭರವಸೆ ನೀಡಿದರು. ಇದು ಅಕ್ಷರಶಃ ವಿಭಜಿತ ಎಸಿ ರೂಂ ಆಗಿತ್ತು, ಪಕ್ಕದ ಕೋಣೆಯಲ್ಲಿ ಇಬ್ಬರು ಅಂಕಲ್‌ಗಳು ಬೆಳಿಗ್ಗೆ 4 ಗಂಟೆಯವರೆಗೆ ‘ಆಯ್ ಗಣಪತ್ ಚಲ್ ದಾರು ಲಾ’ ಹಾಡನ್ನು ಹಾಡುತ್ತಿದ್ದರು ಎಂದು ಹತ್ತು ವರ್ಷದ ಹಳೆಯ ನೆನಪನ್ನು ಕೆದಕಿದ್ದಾರೆ.

ಅವರ ಟ್ವೀಟ್ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿತು. ಟ್ವಿಟರ್‌ನಲ್ಲಿ ಅವರ ಟ್ವೀಟ್‌ಗೆ ನೂರಾರು ಕಾಮೆಂಟ್‌ಗಳು, ರಿಟ್ವೀಟ್‌ಗಳು ಬಂದಿವೆ‌. ಏರ್ ಕಂಡಿಷನರ್‌ಗೆ ರಿಮೋಟ್ ಅನ್ನು ಹೊಂದಿರುವ ಕೊಠಡಿ ಯಾವುದು ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...