ನದಿ ತೀರದಲ್ಲಿದೆ ‘ಫ್ಲಡ್ ಡೈನಿಂಗ್’ ರೆಸ್ಟೋರೆಂಟ್: ಏನಿದರ ವಿಶೇಷತೆ ಗೊತ್ತಾ…..? 10-10-2021 8:42PM IST / No Comments / Posted In: Latest News, Live News, International ಥೈಲ್ಯಾಂಡ್‌ನಲ್ಲಿರುವ ರೆಸ್ಟೋರೆಂಟ್ ಒಂದು ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಏಕೆಂದರೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವಿಶಿಷ್ಟ ಸೇವೆಯಿಂದಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಚಾವೊ ಫ್ರಯಾ ನದಿಯ ದಡದಲ್ಲಿ ಇರುವ ಈ ಉಪಾಹಾರ ಮಂದಿರವು ನೀರಿನಿಂದ ತುಂಬಿದ ಡೆಕ್‌ನಲ್ಲಿ, ಜನರು ಆಹಾರ ಸೇವಿಸಲು ಆರಂಭಿಸಿದ ನಂತರ ಇದ್ದಕ್ಕಿದ್ದಂತೆ ಊಟದ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ. ನಟಿ ಶ್ವೇತಾ ತಿವಾರಿ, ಪುತ್ರಿ ಜೊತೆ ಸಖತ್ ಸ್ಟೆಪ್ಸ್: ವಿಡಿಯೋ ನೋಡಿ ಅಭಿಮಾನಿಗಳು ಕನ್ಫ್ಯೂಸ್….! ಚಾವೊ ಫ್ರಾಯಾದಲ್ಲಿ ಆಗಾಗ್ಗೆ ಪ್ರವಾಹ ಉಂಟಾಗುವುದರಿಂದ ದಡದಲ್ಲಿರುವ ಅನೇಕ ಅಂಗಡಿಗಳನ್ನು ಮಾಲೀಕರು ಮುಚ್ಚಲು ನಿರ್ಧರಿಸಿದ್ದರು. ಆದರೆ ಚೋಪ್ರಾಯ ಪುರಾತನ ಕೆಫೆಯ ಮಾಲೀಕರಾದ ಟಿಟಿಪೋರ್ನ್ ಜೂಟಿಮನೋನ್ ಅವರು, ಪ್ರವಾಹದ ನಡುವೆಯೂ ತನ್ನ ವ್ಯಾಪಾರವನ್ನು ತೆರೆದಿದ್ದಾರೆ. ಇದೀಗ, ರೆಸ್ಟೋರೆಂಟ್ ದಿನನಿತ್ಯ ಹೆಚ್ಚು-ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ. ಟ್ಯೂಷನ್ ಕ್ಲಾಸ್ ನಲ್ಲೇ ಮೈಮರೆತ ಟೀಚರ್: ನೀಚಕೃತ್ಯವೆಸಗಿದ ಶಿಕ್ಷಕ ಅರೆಸ್ಟ್ ಗ್ರಾಹಕರು ಪ್ರವಾಹದ ನೀರಿನಲ್ಲಿ ಕುಳಿತು ಆಹಾರ ಸೇವಿಸುವುದನ್ನು ಸಂಪೂರ್ಣವಾಗಿ ಇಷ್ಟಪಡುತ್ತಾರೆ. ಬಿಕ್ಕಟ್ಟು ಎಂದು ಭಾವಿಸಿದ್ದನ್ನು ಅವಕಾಶವಾಗಿ ಪರಿವರ್ತಿಸಲಾಗಿದೆ ಅಂತಾ ಟಿಟಿಪೋರ್ನ್ ಹೇಳಿದ್ದಾರೆ. ಜನರು ಮುಳುಗಿದ ಕುರ್ಚಿಗಳ ಮೇಲೆ ಕುಳಿತು ಪ್ರವಾಹದ ನೀರಿನಲ್ಲಿ ಊಟ ಮಾಡುವ ವಿಡಿಯೊಗಳನ್ನು ಟ್ವಿಟ್ಟರ್, ಫೇಸ್‌ಬುಕ್, ಟಿಕ್‌ಟಾಕ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ರೆಸ್ಟೋರೆಂಟ್ ಬ್ಯಾಂಕಾಕ್ ಬಳಿಯ ನೊಂತಬುರಿಯಲ್ಲಿ ಇದೆ. ಇತ್ತೀಚಿನ ದಿನಗಳಲ್ಲಿ ಥೈಲ್ಯಾಂಡ್‌ನ ಉತ್ತರ ಮತ್ತು ಮಧ್ಯ ಪ್ರಾಂತ್ಯಗಳು ಪ್ರವಾಹಕ್ಕೆ ತುತ್ತಾಗಿವೆ. ಪರಿಣಾಮವಾಗಿ, ಪ್ರಸಿದ್ಧ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ.