alex Certify ಅಮೆರಿಕದಲ್ಲಿ ಪ್ರಧಾನಿ ಮೋದಿ ಆತಿಥ್ಯ ನಿರ್ವಹಿಸಿದ ಮಂಗಳೂರಿನ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ಪ್ರಧಾನಿ ಮೋದಿ ಆತಿಥ್ಯ ನಿರ್ವಹಿಸಿದ ಮಂಗಳೂರಿನ ಯುವತಿ..!

ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯ ಆತಿಥ್ಯವನ್ನು ಮಂಗಳೂರಿನ ಯುವತಿ ಸುಮಲ್​ ಸಂದೀಪ್​ ನಿರ್ವಹಿಸಿದ್ದರು. ಮೂರು ದಿನಗಳ ಕಾಲ ಮೋದಿ ತಂಗಿದ್ದ ಹೋಟೆಲ್​ನಲ್ಲಿ ಸುಮಲ್​ ಆತಿಥ್ಯ ನೀಡಿದ್ದಾರೆ. ಪ್ರಧಾನಿಯ ಆಹಾರ ಸುರಕ್ಷತೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಸುಮಲ್​ ನಿರ್ವಹಿಸಿದ್ದಾರೆ.

ಮೋದಿಗಾಗಿ ತಯಾರು ಮಾಡಲಾಗುತ್ತಿದ್ದ ಆಹಾರದ ಮೇಲೆ ವಿಶೇಷ ನಿಗಾ ಇಡುತ್ತಿದ್ದ ಸುಮಲ್​​ ಆಹಾರ ಸುರಕ್ಷತೆ ಹಾಗೂ ನಿಯಮ ಪಾಲನೆಯ ಬಗ್ಗೆಯೂ ಕಣ್ಣಿಡುತ್ತಿದ್ದರು. ದಕ್ಷಿಣ ಭಾರತದ ಪ್ರಸಿದ್ಧ ಇಡ್ಲಿ ಸಾಂಬಾರ್​ ಪ್ರಧಾನಿ ಮೋದಿಯವರಿಗೆ ಅಚ್ಚು ಮೆಚ್ಚಂತೆ..!

ಮಂಗಳೂರಿನ ಮೇರಿ ಹಿಲ್​ ನಿವಾಸಿ ಗೋಪಾಲ್​ ಹಾಗೂ ಸುಫಲಾ ದಂಪತಿ ಪುತ್ರಿಯಾಗಿರುವ ಸುಮಲ್​ ಕಳೆದ 10 ವರ್ಷಗಳಿಂದ ವಾಷಿಂಗ್ಟನ್​ ಡಿಸಿಯಲ್ಲಿ ನೆಲೆಸಿದ್ದಾರೆ. ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಆತಿಥ್ಯದ ಮುಖ್ಯ ಜವಾಬ್ದಾರಿ ವಹಿಸಿದ್ದ ಕುಂದಾಪುರ ಮೂಲದ ಆನಂದ ಪೂಜಾರಿಯವರ ವುಡ್​ಲ್ಯಾಂಡ್​ ಡಿಸಿ ಹೋಟೆಲ್​ನಲ್ಲಿ ಸುಮಲ್​ ಕರ್ತವ್ಯ ನಿರ್ವಹಿಸಿದ್ದಾರೆ.

ಕೇವಲ ಈ ಬಾರಿ ಮಾತ್ರವಲ್ಲದೇ ಈ ಹಿಂದೆ ಅಂದರೆ 2017ರಲ್ಲೂ ಪ್ರಧಾನಿ ಮೋದಿಯವರಿಗೆ ಇದೇ ಸುಮಲ್​ ಸಂದೀಪ್​​ ಆತಿಥ್ಯದ ಜವಾಬ್ದಾರಿ ನಿರ್ವಹಿಸಿದ್ದರು. 2017ರಲ್ಲಿ ಮೋದಿ ಜೊತೆಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಫ್ರೇಮ್​ ಮೇಲೆ ಸುಮಲ್​ ಆಟೋಗ್ರಾಫ್​ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...