
ಮೋದಿಗಾಗಿ ತಯಾರು ಮಾಡಲಾಗುತ್ತಿದ್ದ ಆಹಾರದ ಮೇಲೆ ವಿಶೇಷ ನಿಗಾ ಇಡುತ್ತಿದ್ದ ಸುಮಲ್ ಆಹಾರ ಸುರಕ್ಷತೆ ಹಾಗೂ ನಿಯಮ ಪಾಲನೆಯ ಬಗ್ಗೆಯೂ ಕಣ್ಣಿಡುತ್ತಿದ್ದರು. ದಕ್ಷಿಣ ಭಾರತದ ಪ್ರಸಿದ್ಧ ಇಡ್ಲಿ ಸಾಂಬಾರ್ ಪ್ರಧಾನಿ ಮೋದಿಯವರಿಗೆ ಅಚ್ಚು ಮೆಚ್ಚಂತೆ..!
ಮಂಗಳೂರಿನ ಮೇರಿ ಹಿಲ್ ನಿವಾಸಿ ಗೋಪಾಲ್ ಹಾಗೂ ಸುಫಲಾ ದಂಪತಿ ಪುತ್ರಿಯಾಗಿರುವ ಸುಮಲ್ ಕಳೆದ 10 ವರ್ಷಗಳಿಂದ ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿದ್ದಾರೆ. ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ಆತಿಥ್ಯದ ಮುಖ್ಯ ಜವಾಬ್ದಾರಿ ವಹಿಸಿದ್ದ ಕುಂದಾಪುರ ಮೂಲದ ಆನಂದ ಪೂಜಾರಿಯವರ ವುಡ್ಲ್ಯಾಂಡ್ ಡಿಸಿ ಹೋಟೆಲ್ನಲ್ಲಿ ಸುಮಲ್ ಕರ್ತವ್ಯ ನಿರ್ವಹಿಸಿದ್ದಾರೆ.
ಕೇವಲ ಈ ಬಾರಿ ಮಾತ್ರವಲ್ಲದೇ ಈ ಹಿಂದೆ ಅಂದರೆ 2017ರಲ್ಲೂ ಪ್ರಧಾನಿ ಮೋದಿಯವರಿಗೆ ಇದೇ ಸುಮಲ್ ಸಂದೀಪ್ ಆತಿಥ್ಯದ ಜವಾಬ್ದಾರಿ ನಿರ್ವಹಿಸಿದ್ದರು. 2017ರಲ್ಲಿ ಮೋದಿ ಜೊತೆಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಫ್ರೇಮ್ ಮೇಲೆ ಸುಮಲ್ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.

