ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ.
ಕಾಶ್ಮೀರೀ ವಿವಾಹದ ವೇಳೆ ನಡೆದ ಶಾಸ್ತ್ರವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ನವವಿವಾಹಿತರು ಜೊತೆಯಾಗಿ ರೊಟ್ಟಿ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಬಿಟಿಎಸ್ ಚಾಲಕರಾಗಿದ್ದ ಸ್ನೇಹಿತನಿಗೆ ʼದಾದಾ ಸಾಹೇಬ್ ಫಾಲ್ಕೆʼ ಪ್ರಶಸ್ತಿ ಅರ್ಪಿಸಿದ ಸೂಪರ್ ಸ್ಟಾರ್
ಸೋಫಿಯಾ ಜ಼ರಿನ್ ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ಮದುಮಗ ಹಾಗೂ ಮದುಮಗಳು ವಿವಾಹ ನಂತರದ ಸಮಾರಂಭದಲ್ಲಿ ಜೊತೆಯಾಗಿ ರೊಟ್ಟಿ ಮಾಡುತ್ತಿದ್ದಾರೆ. ಕಾಶ್ಮೀರೀ ವಿವಾಹದ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಮದುಮಗಳು ತವದ ಮೇಲೆ ಇಡಲು ರೊಟ್ಟಿ ಹಿಟ್ಟನ್ನು ಲಟ್ಟಿಸಿದರೆ ಅದನ್ನು ಮದುಮಗ ತವದ ಮೇಲೆ ತಿರುವಿ ಹಾಕುತ್ತಿದ್ದು, ಇಬ್ಬರಿಗೂ ಅತಿಥಿಗಳು ಹಾಗೂ ಸಂಬಂಧಿಕರು ಪ್ರೇರೇಪಿಸಿದ್ದಾರೆ.
ಆಕರ್ಷಕ ದೇಹ ಪಡೆಯಲು ಆಹಾರದಲ್ಲಿರಲಿ ಇವು
ಪರಸ್ಪರ ಪ್ರೀತಿ ಹಾಗೂ ಸಹಕಾರದೊಂದಿಗೆ ಮದುಮಕ್ಕಳ ಹೊಸ ಜೀವನದ ಆರಂಭದ ಸಂಕೇತ ಇದಾಗಿದೆ ಎಂದು ಪೋಸ್ಟ್ ಮಾಡಿರುವ ಸೋಫಿಯಾ ಕ್ಯಾಪ್ಷನ್‌ನಲ್ಲಿ ಹೇಳಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ರೊಟ್ಟಿ ಶಾಸ್ತ್ರದ ಬಗ್ಗೆ ಅಚ್ಚರಿಪಟ್ಟಿದ್ದಾರೆ. ಒಟ್ಟಿಗೆ ಸಹಬಾಳ್ವೆಯ ಸಂಕೇತವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
https://twitter.com/SophiaZarin/status/1448218491346063364?ref_src=twsrc%5Etfw%7Ctwcamp%5Etweetembed%7Ctwterm%5E1452154267314233349%7Ctwgr%5E%7Ctwcon%5Es2_&ref_url=https%3A%2F%2Fwww.india.com%2Fviral%2Fviral-video-newly-wed-bride-groom-make-roti-together-as-part-of-kashmiri-wedding-ritual-watch-5068846%2F