![](https://kannadadunia.com/wp-content/uploads/2024/01/9fe3ee22-f9d7-49f0-8806-dab8e44b14d0-1024x777.jpg)
ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಇದೇ ಜನವರಿ 5ರಂದು ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ. ಹೊಸ ಕಲಾವಿದರನ್ನೊಳಗೊಂಡ ಈ ಸಿನಿಮಾದಲ್ಲಿ ಶ್ವೇತಾ ಭಟ್, ವೈಭವ್ ವರ್ಧನ್, ರಾಜು ಶೃಂಗೇರಿ, ಶೃತಿ ಚಂದ್ರಶೇಖರ್, ಪರಶುರಾಮ್ ಗುಡ್ಡಳ್ಳಿ, ಪೂಜಾ ಲತಾ, ಮಂಜುನಾಥ್ ಸೇರಿದಂತೆ ನಿರ್ದೇಶಕ ಯತೀಶ್ ಪನ್ನಸಮುದ್ರ ತೆರೆ ಹಂಚಿಕೊಂಡಿದ್ದಾರೆ.
ರೋಮ್ಯಾಂಟಿಕ್ ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಕ ಯತೀಶ್ ಪನ್ನಸಮುದ್ರ ಅವರೇ ನಿರ್ಮಾಣ ಮಾಡಿದ್ದು, ಶ್ರೀಹರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಅಭಿನವ್ ಶ್ರೀನಿವಾಸ್ ಸಂಕಲನವಿದ್ದು, ಶಿವರಾಜ್ ರಾಥೋಡ್ ಛಾಯಾಗ್ರಹಣವಿದೆ.
![](https://kannadadunia.com/wp-content/uploads/2024/01/a295cfd2-aebe-4f9f-a39c-fa4798087c74-685x1024.jpg)